ಮೂಡಲಗಿಯಲ್ಲಿ ಹಮ್ಮಿಕೊಂಡಿದ್ದ ವ್ಯಾಪಾರಿಗಳು, ಅಧಿಕಾರಿಗಳ ಸಭೆಯಲ್ಲಿ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಮಾತನಾಡಿದರು. ನಾಗಪ್ಪ ಶೇಖರಗೋಳ, ದೀಪಕ ಹರ್ದಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ, ಹನುಮಂತ ತೇರದಾಳ ಉಪಸ್ಥಿತರಿದ್ದರು. 
ಜಿಲ್ಲೆ

ಸೋಂಕು ನಿಯಂತ್ರಣಕ್ಕೆ ಮೂಡಲಗಿ ಲಾಕ್‌ಡೌನ್

ಮೂಡಲಗಿ : ಮಾರಕ ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ಉದ್ದೇಶದಿಂದ ಮೂಡಲಗಿ ತಾಲೂಕಿನಾದ್ಯಂತ ಜು.14ರ ರಾತ್ರಿ 8 ಗಂಟೆಯಿಂದ ಜುಲೈ 24ರ ಬೆಳಗ್ಗೆ 5 ಗಂಟೆವರೆಗೆ ಪೂರ್ಣ ಲಾಕ್‌ಡೌನ್ ಹಾಗೂ ಜು.24ರಿಂದ ಜು.31ರ ವರೆಗೆ ಬೆಳಗ್ಗೆ 5ರಿಂದ ಮಧ್ಯಾಹ್ನ 1 ಗಂಟೆವರೆಗೆ ಲಾಕ್‌ಡೌನ್ ಸಡಿಲಿಕೆ ಮಾಡಿ ಅರ್ಧದಿನ ಸ್ವಯಂ ಲಾಕ್‌ಡೌನ್ ಘೋಷಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾಹಿತಿ ನೀಡಿದ್ದಾರೆ.

ತಾಲೂಕಿನ ಯಾದವಾಡ ಗ್ರಾಮದಲ್ಲಿ ವ್ಯಕ್ತಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣದ ಗುಡ್ಲಮಡ್ಡಿ ಈರಣ್ಣ ದೇವಸ್ಥಾನದ ಆವರಣದಲ್ಲಿ ನಡೆದ ಮುಖಂಡರು, ವ್ಯಾಪಾರಸ್ಥರು ಮತ್ತು ವೈದ್ಯರ ಸಭೆಯಲ್ಲಿ ಮಾತನಾಡಿ, ಕರೊನಾ ಸೋಂಕು ನಿಯಂತ್ರಣಕ್ಕೆ ಸಿಎಂ ಜಿಲ್ಲಾಧಿಕಾರಿಗಳ ಜತೆ ಮಾತನಾಡಿ, ಲಾಕ್‌ಡೌನ್ ನಿರ್ಧಾರ ಕೈಗೊಂಡಿರುವುದು ಉತ್ತಮ ಸಂಗತಿ. ತಾಲೂಕಾಡಳಿತದ ಆದೇಶವನ್ನು ಜನರು ತಪ್ಪದೇ ಪಾಲಿಸಬೇಕು ಎಂದರು. ತಹಸೀಲ್ದಾರ್ ಡಿ.ಜೆ.ಮಹಾತ, ಪೊಲೀಸ್ ವೃತ್ತ ನೀರಿಕ್ಷಕ ವೆಂಕಟೇಶ ಮುರನಾಳ ಮಾತನಾಡಿದರು. ನಾಗಪ್ಪ ಶೇಖರಗೋಳ, ಮುಖ್ಯಾಧಿಕಾರಿ ದೀಪಕ ಹರ್ದಿ, ಬಿಇಒ ಅಜೀತ ಮನ್ನಿಕೇರಿ, ಹನುಮಂತ ತೇರದಾಳ ಇದ್ದರು.

ಅಗತ್ಯ ಸೇವೆಗಳು ಆರಂಭ: ಜನರಿಗೆ ಅಗತ್ಯ ಸೇವೆ ನೀಡುವ ದಿನಸಿ, ಔಷಧಿ, ಆಸ್ಪತ್ರೆ, ಪೆಟ್ರೋಲ್ ಬಂಕ್‌ಗಳು ಎಂದಿನಿಂತೆ ಕಾರ್ಯನಿರ್ವಹಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.