ಲಿಂಗಸುಗೂರು ವಿವಿ ಸಂಘದ ಆವರಣದಲ್ಲಿ ಭೀಷ್ಮಾಚಾರ್ಯ ಕುರಿತ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಕಜ್ಜೆದೋಣಿ ಶಂಕರಾಚಾರ್ಯ ಅವಧೂತ ಆಶ್ರಮದ ವಿದ್ವಾನ್ ಕೃಷ್ಣಾನಂದ ಶರಣರು ಮಾತನಾಡಿದರು. ವಿದ್ವಾನ್ ಜಗದೀಶ ಶರ್ಮಾ ಇತರರಿದ್ದರು. 
ಜಿಲ್ಲೆ

ವ್ಯಾಮೋಹದ ಭ್ರಮೆಯಿಂದ ಹೊರ ಬನ್ನಿ

Kopala - Desk - Eraveni

ಲಿಂಗಸುಗೂರು: ಕಾಲ ಬದಲಾದಂತೆ ವಿಚಾರ, ಆಯುಷ್ಯ, ಆಹಾರ ಪದ್ಧತಿ ಬದಲಾಗುತ್ತದೆ. ಸಾಧಿಸಲು ತಪಸ್ಸು ಗೈದ ಮತ್ತು ಹೋರಾಟ ಮಾಡಿದವರನ್ನು ಕಣ್ಮರೆಯಾಗಿರುವುದು ಪ್ರಕೃತಿಯಲ್ಲಿನ ಸೃಷ್ಟಿ ನಿಯಮವಾಗಿದೆ ಎಂದು ಕಜ್ಜೆದೋಣಿ ಶಂಕರಾಚಾರ್ಯ ಅವಧೂತ ಆಶ್ರಮದ ವಿದ್ವಾನ್ ಕೃಷ್ಣಾನಂದ ಶರಣರು ಹೇಳಿದರು.

ವ್ಯಾಸ ಪ್ರಣೀತ ಆನ್ವಯಿಕ ಮಹಾಭಾರತ ಒಂದು ಚಿಂತನ ಮಂಥನ ಕಾರ್ಯಕ್ರಮ ಅಂಗವಾಗಿ ವಿವಿ ಸಂಘದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭೀಷ್ಮಾಚಾರ್ಯ ಕುರಿತ ಚಿಂತನ ಮಂಥನ ಉಪನ್ಯಾಸದಲ್ಲಿ ಮಾತನಾಡಿದರು.

ಕಣ್ಮರೆಯಾಗಿಸುವುದು ಪ್ರಕೃತಿಯ ಚಿಕಿತ್ಸಾ ಗುಣ ಧರ್ಮವಾಗಿದೆ. ಏನಾದರೂ ಪಡೆಯುವ ವ್ಯಾಮೋಹದ ಭ್ರಮೆಯಿಂದ ತಪಗೈದ ಮತ್ತು ಹೋರಾಟ ಮಾಡಿ ಗೆದ್ದವರು ಮತ್ತು ಸೋತವರು ಯಾರೂ ಈ ಭೂಮಿಯಲ್ಲಿ ಶಾಶ್ವತವಾಗಿ ಇರುವುದಿಲ್ಲ ಎಂದು ಹೇಳಿದರು.

ವಿದ್ವಾನ್ ಜಗದೀಶ ಶರ್ಮಾ ಮಾತನಾಡಿ, ಮಹಾಭಾರತ ಎಲ್ಲರಿಗೂ ಅನ್ವಯವಾಗುವ ಮತ್ತು ಹೊಂದಿಕೊಳ್ಳುವ ಕೃತಿಯಾಗಿದೆ. ಅಂದು ಪ್ರತಿಯೊಬ್ಬ ವ್ಯಕ್ತಿಗಳ ಜೀವನದಲ್ಲಿ ನಡೆದ ಘಟನಾವಳಿಗಳು ಸಾವಿರಾರು ನಂತರ ಇಂದಿಗೂ ಪ್ರತಿಕ್ಷಣ ಪ್ರತಿಯೊಬ್ಬರ ಜೀವನದಲ್ಲಿ ಒಂದಲ್ಲ ಒಂದು ಘಟನೆಗಳು ಮರುಕಳಿಸುತ್ತಿರುತ್ತವೆ. ಅದಕ್ಕಾಗಿಯೇ ಈ ಕೃತಿಗೆ ಆನ್ವಯಿಕ ಮಹಾಭಾರತ ಎಂದು ಶೀರ್ಷಿಕೆ ನೀಡಲಾಗಿದೆ ಎಂದರು.