ಗದಗ: ಸಣ್ಣ ಮತ್ತು ಬೃಹತ್ ಕೈಗಾರಿಕೆಗಳು ಸ್ಥಾಪನೆಯಾಗಲು ಹಾಗೂ ಅದಕ್ಕೆ ತಕ್ಕಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವದು ಸರಕಾರ ಮತ್ತು ಜನಪ್ರತಿನಿಧಿಗಳ ಕರ್ತವ್ಯ, ತಪ್ಪಿದಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ನೂತನ ಅಧ್ಯಕ್ಷ ಎಸ್.ಪಿ.ಸಂಶಿಮಠ ಹೇಳಿದರು.
ಅವರು ಶುಕ್ರವಾರ ಗದುಗಿನ ಕ್ಲರ್ಕ್ ಇನ್ ಹೋಟೇಲ್ ಸಭಾಂಗಣದಲ್ಲಿ ನರಸಾಪೂರ ಇಂಡಸ್ಟಿ ಅಸೋಶಿಯೇಶನ್‌ದ ೮ನೇ ವಾರ್ಷಿಕ ಸರ್ವ ಸಾಧಾರಣ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬೃಹತ್ ಕೈಗಾರಿಕೆಗಳು, ದೊಡ್ಡ ದೊಡ್ಡ ಉದ್ಯಮಗಳು ಸ್ಥಾಪನೆಗೊಂಡಿಲ್ಲ ಅದಕ್ಕೆ ಕಾರಣ ಉತ್ತರ ಕರ್ನಾಟಕದ ಚುನಾಯಿತ ಜನಪ್ರತಿನಿಧಿಗಳು ಹಾಗೂ ಆಡಳಿತ ಚುಕ್ಕಾಣಿ ಹಿಡಿದ ರಾಜಕೀಯ ಪಕ್ಷಗಳ ಮಲತಾಯಿ ಧೋರಣೆಯಿಂದಾಗಿ ಹೀಗಾಗಿದೆ ಎಂದರು.
ಉದ್ಯಮಿದಾರರಿ ವ್ಯಾಪಾರ ವಹೀವಾಟು ನಡೆಸುವ ವ್ಯಾಪಾರಸ್ಥರಿಂದ ಸರಕಾರಕ್ಕೆ ಸಲ್ಲಬೇಕಾದ ಬೇರೆ ಬೇರೆ ರೀತಿಯ ಆದಾಯ ಖಜಾನೆಗೆ ಸೇರುವದು ತಪ್ಪಿದಲ್ಲಿ ಕಾನೂನು ಪ್ರಕಾರ ದಂಡ ಸಮೇತ ವಸೂಲ ಮಾಡಲಾಗುತ್ತಿದೆ ಆದರೆ ಸರಕಾರದಿಂದ ಆಗಬೇಕಿರುವ ಮೂಲಭೂತ ಸೌಲಭ್ಯಗಳು ಆಗುತ್ತಿಲ್ಲ. ಚುನಾವಣೆಯ ಮುನ್ನ ಚೇಂಬರ್ ಸೇರಿದಂತೆ ವ್ಯಾಪಾರಸ್ಥರ ಸಂಘಟನೆಗಳ ಮೂಲಕ ಮತಯಾಚಿಸಿ ಚುನಾವಣೆಯಲ್ಲಿ ಗೆದ್ದು ಬಂದ ನಂತರ ನಮ್ಮನ್ನು ಅಲಕ್ಷಿಸುವ ಯಾವುದೇ ರಾಜಕೀಯ ಪಕ್ಷದ ವ್ಯಕ್ತಿಗೆ ತಕ್ಕ ಪಾಠ ಕಲಿಸುವ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಿದೆ ಎಂದರು.
ನರಸಾಪೂರ ಇಂಡಸ್ಟಿçÃಯಲ್ ಏರಿಯಾ ಈಗ ಸಾಕಷ್ಟು ಬೆಳವಣಿಗೆ ಆಗಿದೆ, ಸಧ್ಯ ಅಲ್ಲಿರುವ ಮೂಲಭೂತ ಸೌಲಭ್ಯಗಳು ಕಡಿಮೆ ಇದ್ದರೂ ಗುಣಮಟ್ಟದಲ್ಲಿಲ್ಲ. ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲರಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ ಇಲ್ಲಿನ ಕೆಲವು ಸಮಸ್ಯೆಗಳನ್ನು ಅವರು ತುರ್ತಾಗಿ ಇತ್ಯರ್ಥಗೊಳಿಸಿ ನಾಗಪೂರ, ಗುಜರಾಜ ಮಾದರಿಯ ಸೌಲಭ್ಯ ನೀಡಬೇಕಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಮದುಸೂಧನ ಪುಣೇಕರ, ಕಾರ್ಯದರ್ಶಿ ಶರಣಬಸಪ್ಪ ಗುಡಿಮನಿ ಮಾತನಾಡಿ ಬೃಹತ್ ಬಂಡವಾಳ ಹಾಕಿ ಉದ್ಯಮ ಸ್ಥಾಪಿಸಿರುವ ವ್ಯಾಪಾರಸ್ಥ ಮೂಲಭೂತ ಸೌಲಭ್ಯಗಳಿಲ್ಲದೆ ಸಂಕಷ್ಟದಲ್ಲಿದ್ದಾನೆ. ಸ್ಪರ್ಧಾತ್ಮಕತೆಯ ಮಾರುಕಟ್ಟೆಯ ಸಮಸ್ಯೆ, ಸರಕಾರಕ್ಕೆ ತುಂಬಬೇಕಾದ ಶುಲ್ಕ, ಕರೆಂಟ್ ಬಿಲ್, ಸಿಬ್ಬಂದಿ ವೇತನ, ಇತರೆ ಖರ್ಚು, ಕಟ್ಟಡ, ಬಾಡಿಗೆ, ಸಾರಿಗೆ, ಬ್ಯಾಂಕ ಕಂತು, ಬಡ್ಡಿ, ಅಧಿಕಾರಿಗಳ ಕಿರುಕುಳ ಹೀಗೆ ಮುಂತಾದ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ನಮ್ಮವರೇ ಆದ ಜಿಲ್ಲಾ ಉಸ್ತುವಾರಿ ಸಚಿವರು ವ್ಯಾಪಾರಸ್ಥರ ಸಮಸ್ಯೆಗಳನ್ನು ಬಗೆಹರಿಸಿ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ನರಸಾಪೂರ ಇಂಡಸ್ಟಿ ಅಸೋಶಿಯೇಶನ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿ ಸಚಿವ ಎಚ್.ಕೆ.ಪಾಟೀಲರಿಗೆ ನರಸಾಪೂರ ಇಂಡಸ್ಟಿಯ ಹಲವಾರು ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದು ನಾವೆಲ್ಲ ಉದ್ಯಮಿಗಳು ಅವರ ಮೇಲೆ ವಿಶ್ವಾಸವಿಟ್ಟಿದ್ದೇವೆ. ರಿಂಗ್ ರೋಡ ಆಗಬೇಕು, ಮೂಲಭೂತ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿದಲ್ಲಿ ಇಲ್ಲಿ ಉದ್ಯಮಗಳು ಉಳಿದು ಬೆಳೆದು ಬರುವವು ಜೊತೆಗೆ ಸಚಿವರ ಗೌರವವೂ ಹೆಚ್ಚುವದು ಎಂದರು.
ಎಸ್.ಪಿ.ಸAಶಿಮಠ, ಮದುಸೂಧನ ಪುಣೇಕರ, ಶರಣಬಸಪ್ಪ ಗುಡಿಮನಿ, ವಿನೋದ ಪಟೇಲ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಓ.ಆರ್.ಬಿ ಸೋಲಾರ ಕುರಿತು ಮಾಹಿತಿ ನೀಡಲಾಯಿತು. ನವೀನ ಮೇಡಿ ಪ್ರಾರ್ಥಿಸಿದರು, ಖಜಾಂಚಿ ಸಿ.ಜಿ.ಹಿರೇಗೌಡ್ರ ಲೆಕ್ಕಪತ್ರ ಮಂಡಿಸಿದರು, ಕಾರ್ಯದರ್ಶಿ ದಶರಥರಾಜ ಕೊಳ್ಳಿ ವರದಿ ವಾಚಿಸಿ ನಿರೂಪಿಸಿದರು, ಸಹ ಕಾರ್ಯದರ್ಶಿ ವಿನೋದ ಪಟೇಲ್ ವಂದಿಸಿದರು.
ವೇದಿಕೆಯ ಮೇಲೆ ಎಸ್.ಎಸ್.ಪಾಟೀಲ, ಹರಿಲಾಲ ಪಟೇಲ್, ಈಶಣ್ಣ ಮುನವಳ್ಳಿ, ಈರಣ್ಣ ಗೊಡಚಿ, ಅರ್ಜುನ ಭಾಸ್ಕರ್, ಮಹಾಂತೇಶ ಅಂಗಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನರಸಾಪೂರ ಇಂಡಸ್ಟಿçÃಯಲ್ ಅಸೋಶಿಯೇಶನ್‌ದ ಪದಾಧಿಕಾರಿಗಳು, ಸದಸ್ಯರು, ಉದ್ಯಮಿದಾರರು ಪಾಲ್ಗೋಂಡಿದ್ದರು.