ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಕೈಗಾರಿಕಾ ವಲಯದಲ್ಲಿ ಹಾಗೂ ಕೃಷಿ ವಲಯದಲ್ಲಿರುವ ಅವಕಾಶಗಳನ್ನು ತಿಳಿಯಪಡಿಸುವ ಉದ್ದೇಶದಿಂದ ಸ್ಥಳ ಭೇಟಿ ಕಾರ್ಯಕ್ರಮ ನಡೆಯಿತು.
ಕರ್ನಾಟಕ ಸರ್ಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸ್ವಚ್ಛ ಭಾರತ ಮಿಷನ್ ಮಂಗಳೂರಿನ ಮಂಗಳಾ ನಿರ್ವಹಣಾ ಸಂಸ್ಥೆ ನಿರ್ವಹಿಸುತ್ತಿರುವ ತೆಂಕ ಎಡಪದವಿನಲ್ಲಿರುವ ಸಮಗ್ರ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿದರು. ಒಡ್ಡೂರು -ರ್ಮ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಸಿ.ಎನ್.ಜಿ.ತಯಾರಿಕಾ ಘಟಕ, ಗೋಶಾಲೆ ಹಾಗೂ ಕೆರೆಯನ್ನು ವೀಕ್ಷಿಸಿದರು.
ಸಮಗ್ರ ಘನತ್ಯಾಜ್ಯ ನಿರ್ವಹಣಾ ಘಟಕದ ನಿರ್ವಾಹಕ ಸಂತೋಷ್ ಘಟಕದ ಕಾರ್ಯ ಚಟುವಟಿಕೆಗಳ ಬಗ್ಗೆ ಹಾಗೂ ತ್ಯಾಜ್ಯ ನಿರ್ವಹಣೆಯ ಅಗತ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ದ್ವಿತೀಯ ವಾಣಿಜ್ಯ ವಿಭಾಗದ ಸುಮಾರು ೧೩೦ ವಿದ್ಯಾರ್ಥಿಗಳ ತಂಡ ಕೈಗಾರಿಕಾ ಭೇಟಿಯಲ್ಲಿ ಭಾಗವಹಿಸಿದೆ. ವಾಣಿಜ್ಯ ವಿಭಾಗದ ಮುಖ್ಯಸ್ಥ ದೇವಿ ಪ್ರಸಾದ್, ವಾಣಿಜ್ಯ ಸಂಘದ ಸಂಯೋಜಕಿ ಭಾಗ್ಯಶ್ರೀ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.
ಯಾವುದೇ ತ್ಯಾಜ್ಯ ನಿರುಪಯುಕ್ತವಲ್ಲ ಅದನ್ನು ಸಂಪನ್ಮೂಲವಾಗಿ ಪರಿವರ್ತಿಸುವ ಸಾಧ್ಯತೆಗಳಿವೆ. ಈ ಕೆಲಸ ಮಾಡುವ ಮೂಲಕ ಉದ್ಯಮದ ಜತೆ ಸಾಮಾಜಿಕ ಹೊಣೆಗಾರಿಕೆಯನ್ನು ನಾವು ನಿರ್ವಹಿಸುತ್ತಿದ್ದೇವೆ. ಇದರಿಂದಾಗಿ ಭೂಮಿ ಹಾಗೂ ಜಲಮೂಲಗಳನ್ನು ಸೇರುತ್ತಿದ್ದ ಟನ್‌ಗಟ್ಟಲೆ ತ್ಯಾಜ್ಯ ನಿರ್ವಹಣೆಯಾಗುವಲ್ಲಿ ತ್ಯಾಜ್ಯ ನಿರ್ವಹಣಾ ಘಟಕಗಳು ಸಹಕಾರಿಯಾಗಿವೆ.
| ಸಂತೋಷ್, ನಿರ್ವಾಹಕ, ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಘಟಕ