ಸಾಗರ: ಅಡಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘದ(ಆಪ್ಸ್‌ಕೋಸ್) ನೂತನ ಅಧ್ಯಕ್ಷರಾಗಿ ಬಿ.ಎ.ಇಂದೂಧರ ಬೇಸೂರು ಹಾಗೂ ಉಪಾಧ್ಯಕ್ಷರಾಗಿ ಕೆ.ಎಸ್.ಸುಬ್ಬರಾವ್ ಕೇಡಲಸರ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.
ಸಂಸ್ಥೆಯ ನಿರ್ದೇಶಕರ ಸ್ಥಾನಕ್ಕೆ ಸೆ.10ರಂದು ಚುನಾವಣೆ ನಡೆದಿತ್ತು. ಹಾಲಿ ಅಧ್ಯಕ್ಷ ಇಂದೂಧರ ಮತ್ತು ಸುಬ್ಬರಾವ್ ಕಳೆದ ಸಾಲಿನಲ್ಲೂ ನಿರ್ದೇಶಕರಾಗಿದ್ದರು. ಈ ಬಾರಿಯೂ ಪುನರಾಯ್ಕೆಯಾಗಿದ್ದರು. ಇಂದೂಧರ ಈ ಹಿಂದೆಯೂ ಆಪ್ಸ್‌ಕೋಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಕಾಂಗ್ರೆಸ್ ಪ್ರಮುಖರು ಅಭಿನಂದಿಸಿದರು.
ನಗರಸಭಾ ಸದಸ್ಯ ಗಣಪತಿ ಮಂಡಗಳಲೆ, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಬೇಳೂರು, ಮಂಜುನಾಥ್, ಆನಂದ್, ಚಿನ್ಮಯಿ, ರಮೇಶ್, ಧನಂಜಯ್ ಇತರರಿದ್ದರು.