ಜಿಲ್ಲೆ

ರೋಟರಿ ಪದಾಧಿಕಾರಿಗಳ ಪದಗ್ರಹಣ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್‌ನ 2024- 2025ನೇ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾಗಿ ಕರಣ ದೊಡ್ಡವಾಡ, ಕಾರ್ಯದರ್ಶಿಯಾಗಿ ವಾಮನ ಮಂತ್ರಿ, ಖಜಾಂಚಿಯಾಗಿ ಗಿರೀಶ ಬೆಟಗೇರಿ ಅಽಕಾರ ವಹಿಸಿಕೊಂಡರು.
ಜಿಲ್ಲಾ ಮಾಜಿ ಗವರ್ನರ್ ಆನಂದ ಸರಾ-À ನಾಯಕತ್ವದ ಪ್ರಾಮುಖ್ಯತೆ, ಸಮುದಾಯ ಸೇವೆ ಮತ್ತು ಧನಾತ್ಮಕ ಬದಲಾವಣೆಯನ್ನು ಉತ್ತೇಜಿಸುವಲ್ಲಿ ರೋಟರಿಯ ಪಾತ್ರವನ್ನು ವಿವರಿಸಿದರು. ಸುನೀಲ ಬಾಗೇವಾಡಿ ಮತ್ತು ಶರಯು ನಾಯಕ ಅವರು ತಮ್ಮ ಅವಽಯಲ್ಲಿ ಕೈಗೊಂಡ ಕಾರ್ಯಗಳನ್ನು ತಿಳಿಸಿದರು.
ಅತ್ಯುತ್ತಮ ಸೇವೆ ಗುರುತಿಸಿ ರೋಟರಿಯನ್ನರಿಗೆ ಪ್ರಶಸ್ತಿ ನೀಡಿ ಗೌರವಿಸಲಾ¬ತು. ಪಿಡಿಜಿ ಡಾ ರಾಜನ್ ದೇಶಪಾಂಡೆ, ಪಿಡಿಜಿ ಗಣೇಶ ಭಟ್, ಪಿಡಿಜಿ ರವಿ ದೇಶಪಾಂಡೆ, ವಲಯ ಸಂಯೋಜಕ ರವಿ ಹುಂಜೆ, ಸಹಾಯಕ ಗವರ್ನರ್ ಪಲ್ಲವಿ ದೇಶಪಾಂಡೆ, ಸತೀಶ ಇರಕಲ್, ಮಹಾಂತೇಶ ಗುಂಜೆಟ್ಟಿ, ಇತರರಿದ್ದರು.