ವಿಜಯವಾಣಿ ಸುದ್ದಿಜಾಲ ಧಾರವಾಡ
ಸಿವಿಲ್ ಇಂಜಿನಿಯರಿ0ಗ್ ಕ್ಷೇತ್ರವು ಸಮಾಜ, ಸಂಸ್ಕೃತಿ ಮತ್ತು ಮಾನವ ನಡವಳಿಕೆಯೊಂದಿಗೆ ಅಂತರ್ ಸಂಪರ್ಕವನ್ನು ಹೊಂದಿದೆ. ಅದನ್ನು ಸುಭದ್ರವಾಗಿ ಕಟ್ಟಿಕೊಡುವ ಕಾರ್ಯವನ್ನು ಅಸೋಸಿಯೇಷನ್ ಮಾಡುತ್ತಿರುವುದು ಹೆಮ್ಮೆಯ ಸಂಗಿತಿ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಲೋಕಲ್ ಸೆಂಟರ್ ವತಿಯಿಂದ ನಗರದ ಆಲೂರು ವೆಂಕಟರಾವ ಸಭಾಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅಸೋಸಿಯೇಷನ್‌ನ ನೂತನ ಪದಾಽಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನೂತನ ಅಧ್ಯಕ್ಷ ಸುನೀಲ ಬಾಗೇವಾಡಿ, ಉಪಾಧ್ಯಕ್ಷ ಅರುಣ ಶೀಲವಂತ, ಕಾರ್ಯದರ್ಶಿ ಸಿದ್ದನಗೌಡ ಪಾಟೀಲ, ಖಜಾಂಚಿ ಕಬೀರ ನದಾ-ï ಮತ್ತು ಕಾರ್ಯಕ್ರಮ ಸಂಯೋಜಕ ದಾಮೋದರ ಹೆಗಡೆ ಅವರಿಗೆ ಶಾಸಕ ಅರವಿಂದ ಬೆಲ್ಲದ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಷನ್ ಅಧ್ಯಕ್ಷ ಸುನೀಲ ಬಾಗೇವಾಡಿ ಮಾತನಾಡಿ, ಸದಸ್ಯರು ಮತ್ತು ಸಾರ್ವನಿಕರಿಗೆ ಮಾರ್ಗದರ್ಶನ ನೀಡಲು ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ವಿಜಯೆ0ದ್ರಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವಸುಧಾ ಚಕ್ರವರ್ತಿ ಪ್ರಾರ್ಥಿಸಿದರು. ದಾಮೋದರ ಹೆಗಡೆ ಸ್ವಾಗತಿಸಿದರು. ಮಾರ್ತಾಂಡಪ್ಪ ಕತ್ತಿ ನಿರೂಪಿಸಿದರು. ಸಿದ್ದನಗೌಡ ಪಾಟೀಲ ವಂದಿಸಿದರು.
ಎ0. ನಾರಾಯಣ, ಬಸವರಾಜ ಬಂಡಿವಡ್ಡರ, ಕಿರಣ ಶಿಂಧೆ, ಆನಂದ ಶಿವಾಪೂರ, ಮೆಹಬೂಬ್ ಬಾಷಾ, ಕೆ.ಎನ್. ಪಾಟೀಲ, ಮಹಾದೇವ ಕರ್ಜಗಿ, ಆರ್.ಆರ್. ಬಾರಕೇರ, ಶಂಕರ ಜಿರಾಳ, ಗುರು ಮತ್ತೂರ, ಎಂ.ಎನ್. ಪಾಟೀಲ, ವಿನಾಯಕ ಜೋಶಿ, ಅಶ್ವಿನ ಕೊಪ್ಪಿಕರ, ಎಸ್.ಟಿ. ಜೋಶಿ, ಇತರರಿದ್ದರು.