ಜಿಲ್ಲೆ

ನಿಸ್ವಾರ್ಥ ಸೇವೆಯ ರೋಟರಿ ಧ್ಯೇಯ: ನೂತನ ಅಧ್ಯಕ್ಷೆ ಬಿ.ಎಸ್.ಅನುಪಮಾ ಹೇಳಿಕೆ

ಮಂಡ್ಯ: ನಿಸ್ವಾರ್ಥ ಸೇವೆ ಸಲ್ಲಿಸುವುದು ಹಾಗೂ ಸ್ನೇಹದ ಸಮ್ಮಿಲನವನ್ನು ವೃದ್ಧಿಸುವುದೇ ನಮ್ಮ ಸಂಸ್ಥೆಯ ಧ್ಯೇಯ ಎಂದು ರೋಟರಿ ನೂತನ ಅಧ್ಯಕ್ಷೆ ಬಿ.ಎಸ್.ಅನುಪಮಾ ಹೇಳಿದರು.

ನಗರದ ಹೊಳಲು ರಸ್ತೆಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ರೋಟರಿ ಸಂಸ್ಥೆಗೆ 118 ವರ್ಷದ ಇತಿಹಾಸವಿದೆ. ಅಂತಾರಾಷ್ಟ್ರೀಯ ಸದ್ಬಾವನೆ ಮತ್ತು ಶಾಂತಿಗಾಗಿ ಸಮುದಾಯ ಸೇವೆಯನ್ನು ಮಾಡುವುದು ಸಂಸ್ಥೆಯ ಉದ್ದೇಶ. ಪ್ರತಿ ವರ್ಷ ಒಂದೊಂದು ಘೋಷ ವಾಕ್ಯದೊಂದಿಗೆ ಸೇವಾ ಚಟುವಟಿಕೆ ಮಾಡಲಾಗುತ್ತಿದೆ. ನಿರಂತರ ಶಾಂತಿ, ಮಹಿಳಾ ಸಬಲೀಕರಣ, ವೈವಿಧ್ಯತೆಯಲ್ಲಿ ಸಮಾನತೆ-ಏಕತೆ ಸಾಧಿಸುವುದು ಪ್ರಮುಖ ಸೇವಾ ಕಾರ್ಯವಾಗಿದೆ. ಪೋಲಿಯೋ ಮುಕ್ತ ಸಮಾಜ ನಿರ್ಮಾಣ ಮಾಡುವ ಉದ್ದೇಶದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದು ತಿಳಿಸಿದರು.

ನಿಯೋಜಿತ ಜಿಲ್ಲಾ ಪಾಲಕ ಮಹೇಂದ್ರ ಪ್ರಸಾದ್, ಎಲಿಜಬೆತ್‌ಚೆರ್ರಿ, ಪರಮೇಶ್, ಪಿ.ಡಿ.ಜೆ.ನಾಗೇಂದ್ರಪ್ರಸಾದ್, ಜಿಲ್ಲಾ ಕಾರ್ಯದರ್ಶಿ ವಿನೋದ್‌ಕುಮಾರ್, ವಲಯ ಪಾಲಕ ಕುಮಾರ್‌ರಾಜು, ಸಹಾಯಕ ಪಾಲಕ ಬಸವರಾಜು, ನಿಕಟ ಪೂರ್ವ ಅಧ್ಯಕ್ಷ ನಾರಾಯಣ್, ಅನುಪಮಾ ನಾಗರಾಜ್‌ಗೌಡ, ರಾಜೇಶ್, ಶರತ್, ಎ.ಸಿ.ರಮೇಶ್, ಅನಂತಕುಮಾರ್, ಶಂಕರ್‌ನಾರಾಯಣ್‌ಶಾಸ್ತ್ರಿ, ಬರ್ನಾಡಪ್ಪ ಇತರರಿದ್ದರು.