ಬೆಂಗಳೂರು: ಪಾಲಿಕೆ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ಗಳಿಗೆ ರಾಜ್ಯ ಸರ್ಕಾರ ಅನುದಾನ ನೀಡಿಲ್ಲ. ಹಾಗಾಗಿ ಸಬ್ಸಿಡಿ ಹಣ ನೀಡಲು ಪಾಲಿಕೆಗೆ ಹೊರೆಯಾಗುತ್ತಿದ್ದು, ಹೆಚ್ಚಳ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.
ಇಂದಿರಾ ಕ್ಯಾಂಟೀನ್ಗಳಲ್ಲಿ ಒಂದು ಊಟಕ್ಕೆ ಜನರು 10 ರೂ. ಪಾವತಿಸಿದರೆ, ಪಾಲಿಕೆ 22 ರೂ. ಪಾವತಿಸುತ್ತಿದೆ. ಹಾಗಾಗಿ ಗುತ್ತಿಗೆದಾರರಿಗೆ ವಾರ್ಷಿಕ 100 ಕೋಟಿ ರೂ.ಗಿಂತಲೂ ಹೆಚ್ಚಿನ ಸಬ್ಸಿಡಿ ಹಣ ನೀಡಬೇಕಾಗುತ್ತದೆ. ಇದರಿಂದ ಪಾಲಿಕೆಯ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ 2020-21ನೇ ಸಾಲಿನ ಬಜೆಟ್ನಲ್ಲಿ ಇಂದಿರಾ ಕ್ಯಾಂಟೀನ್ಗಳಿಗೆ ಸರ್ಕಾರ ಅನುದಾನ ನೀಡದಿದ್ದರೆ ದರ ಹೆಚ್ಚಳದ ಆಯುಕ್ತರ ಪ್ರಸ್ತಾವನೆ ಕುರಿತು ಚಿಂತನೆ ನಡೆದಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
5 ರೂ. ಹೆಚ್ಚಳ ಸಾಧ್ಯತೆ: ಇಂದಿರಾ ಕ್ಯಾಂಟೀನ್ಗಳಲ್ಲಿ ಬೆಳಗಿನ ಉಪಾಹಾರದ (ತಿಂಡಿ) ದರ 5ರಿಂದ 10 ರೂ.ಗೆ, ಮಧ್ಯಾಹ್ನ ಮತ್ತು ರಾತ್ರಿ ಊಟದ ದರ 10ರಿಂದ 15 ರೂ.ಗೆ ಹೆಚ್ಚಳವಾಗುವ ಸಾಧ್ಯತೆಯಿದೆ. ಒಂದು ಊಟಕ್ಕೆ ಗುತ್ತಿಗೆದಾರರು 32 ರೂ. ಬಿಲ್ ಮಾಡುತ್ತಾರೆ. ಜನ 10 ರೂ. ಕೊಟ್ಟರೆ ಪಾಲಿಕೆ, 22 ರೂ. ಪಾವತಿಸುತ್ತಿದೆ. ಹಾಗಾಗಿ ಸರ್ಕಾರ ಕೊಡುವ ಅನುದಾನದ ಮೇಲೆ ದರ ಹೆಚ್ಚಳ ತೀರ್ವನವಾಗಲಿದೆ.
ಮೇಯರ್ಗೆ ಅಧಿಕಾರವಿಲ್ಲ
ಟೆಂಡರ್ ನೀಡಿಕೆ ವಿಚಾರದಲ್ಲಿ ಮೇಯರ್ ರಚಿಸಿರುವ ಸಮಿತಿ ಬಗ್ಗೆ ಆಡಳಿತ ಪಕ್ಷದಲ್ಲೇ ಅಪಸ್ವರವಿದೆ. ಸಮಿತಿ ರಚನೆಗೆ ಮೇಯರ್ಗೆ ಅಧಿಕಾರವಿದೆಯೇ ಎಂದು ಸದಸ್ಯ ಉಮೇಶ್ ಶೆಟ್ಟಿ ಪ್ರಶ್ನಿಸಿದರು. ಆಗ, ಮೇಯರ್ ಅಧಿಕಾರವನ್ನೇ ಕೌನ್ಸಿಲ್ ಸಭೆಯಲ್ಲಿ ಪ್ರಶ್ನಿಸುತ್ತಿರುವ ಉಮೇಶ್ಶೆಟ್ಟಿ ಕೂಡಲೆ ಕ್ಷಮೆ ಕೇಳಬೇಕು ಎಂದು ಪ್ರತಿಪಕ್ಷಗಳ ಸದಸ್ಯರು ಆಗ್ರಹಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಗೆ ಕೊಡುಗೆ
ಯಡಿಯೂರು ವಾರ್ಡ್ 167ರಲ್ಲಿ ಸರ್ದಾರ್ ವಲ್ಲಭಬಾಯಿ ಅಕಾಡೆಮಿ ಕೇಂದ್ರ ನಿರ್ವಿುಸಲಾಗಿದೆ. ಯುಪಿಎಸ್ಸಿ, ಕೆಪಿಎಸ್ಸಿ ಹಾಗೂ ಉನ್ನತ ಶಿಕ್ಷಣ ತರಬೇತಿ ತರಗತಿ ನಡೆಸಲು ಮತ್ತು 5 ವರ್ಷಗಳ ನಿರ್ವಹಣೆಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ಗೆ ನೀಡಲಾಯಿತು. ಲಾಲ್ಬಾಗ್ ಪಶ್ಚಿಮ ದ್ವಾರದ ಬಳಿಯ ಎರಡು ಸಣ್ಣ ಉದ್ಯಾನಗಳನ್ನು ಸ್ವಂತ ವೆಚ್ಚದಲ್ಲಿ ಅಭಿವೃದ್ಧಿ ಮತ್ತು ನಿರ್ವಹಣೆ ಮಾಡಲು ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ಗೆ ವಹಿಸಲು ತೀರ್ವನಿಸಲಾಯಿತುತನಿಖಾ ವರದಿಗಳೇ ಬಂದಿಲ್ಲ
ಸಭೆ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಅಬ್ದುಲ್ ವಾಜೀದ್, ವೈಟ್ಟಾಪಿಂಗ್, ಟಿವಿಸಿಸಿ, ಇಂದಿರಾ ಕ್ಯಾಂಟೀನ್ ಮತ್ತು ಟೆಂಡರ್ಶ್ಯೂರ್ ಸೇರಿ ಅನೇಕ ಯೋಜನೆಗಳನ್ನು ತನಿಖೆಗೆ ವಹಿಸಿದೆ. 3 ತಿಂಗಳೊಳಗೆ ತನಿಖಾ ವರದಿ ನೀಡುವಂತೆ ತಿಳಿಸಲಾಗಿದ್ದರೂ, ಯಾವುದೇ ವರದಿ ಸಲ್ಲಿಕೆಯಾಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಬೆಂಗಳೂರು ಅಭಿವೃದ್ಧಿಗೆ 8 ಸಾವಿರ ಕೋಟಿ ರೂ. ನೀಡಿದ್ದರು. ಆದರೆ ಈಗ 1 ರೂ. ಅನುದಾನವಿಲ್ಲ,ಅಭಿವೃದ್ಧಿ ಕಾರ್ಯಗಳೂ ನಡೆಯುತ್ತಿಲ್ಲ. ಆಡಳಿತದ ಪಕ್ಷದ ಸಾಧನೆ ಶೂನ್ಯ ಎಂದರು.