ಸರಗೂರು: ಇಂದಿನ ದುಬಾರಿ ದಿನಗಳಲ್ಲೂ ಕಡಿಮೆ ದರದಲ್ಲಿ ಆಹಾರ ವಿತರಿಸುವ ಇಂದಿರಾ ಕ್ಯಾಂಟೀನ್ ಬಡವರಿಗೆ ವರವಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ಮಹಾವೀರ ಸರ್ಕಲ್ ಬಳಿ ಇರುವ ಪ್ರವಾಸಿ ಮಂದಿರದ ಪಕ್ಕದಲ್ಲಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಇಂದಿರಾ ಕ್ಯಾಂಟೀನ್‌ನಲ್ಲಿ ತಿಂಡಿಗೆ 5 ರೂ., ಊಟಕ್ಕೆ 10 ರೂ. ನಿಗದಿ ಮಾಡಿದ್ದು, ಇದು ಬಡವರಿಗೆ ಖಂಡಿತ ನೆರವಾಗಲಿದೆ ಎಂದರು.
ಮಧ್ಯಮ, ಬಡ ಹಾಗೂ ಶ್ರಮಿಕವರ್ಗದ ಜನರನ್ನು ಹಸಿವು ನೀಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಲೋಚಿಸಿ ಇಂದಿರಾ ಕ್ಯಾಂಟಿನ್ ಜಾರಿಗೆ ತಂದರು. ಅದರಂತೆ ತಾಲೂಕಿನಲ್ಲಿ ಶಾಸಕ ಅನಿಲ್‌ಕುಮಾರ್ ಮುಂದಾಳತ್ವದಲ್ಲಿ ಆರಂಭಗೊಂಡಿದೆ ಎಂದರು.
ಪಪಂ ಸದಸ್ಯ ಶ್ರೀನಿವಾಸ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಒಂದಲ್ಲ ಒಂದು ರೀತಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದು, ಹಸಿದವರ ಹೊಟ್ಟೆ ತುಂಬಿಸುವುದರ ಜತೆಗೆ ನಿರುದ್ಯೋಗ ನಿವಾರಣೆ ಹಾಗೂ ಮಹಿಳಾ ಸ್ವಾವಲಂಬನೆಗೆ ಗ್ಯಾರಂಟಿ ಕಾರ್ಯಕ್ರಮ ಜಾರಿಗೊಳಿಸಿದ್ದು, ಇದನ್ನು ಜನರು ಮೆಚ್ಚಿದ್ದಾರೆ ಎಂದರು.
ಪಪಂ ಇಒ ಎಸ್.ಕೆ. ಸಂತೋಷಕುಮಾರ್ ಮಾತನಾಡಿ, ಬಡವರ ಸಲುವಾಗಿಯೇ ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ. ಯೋಜನೆಗಳು ಬಹಳಷ್ಟು ಬರುತ್ತವೆ. ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಮಹತ್ವದ ಕೆಲಸವಾಗಿದೆ ಎಂದರು.
ಇದೇ ವೇಳೆ ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಹಾಗೂ ಸರ್ವಸದಸ್ಯರು ಆಹಾರ ಪರಿಶೀಲಿಸಿ ಸಾರ್ವಜನಿಕರಿಗೆ ವಿತರಿಸಿದರು. ಪಪಂ ಉಪಾಧ್ಯಕ್ಷ ಶಿವಕುಮಾರ್, ಸದಸ್ಯರಾದ ಹೇಮಾವತಿ ರಮೇಶ್, ಚೈತ್ರಾ ಸ್ವಾಮಿ, ಸಣ್ಣತಾಯಮ್ಮ, ಚಂದ್ರಕಲಾ ರಾಜಣ್ಣ, ನೂರಳಾಸ್ವಾಮಿ, ಉಮಾ ರಾಮಚಂದ್ರ, ಶ್ರೀನಿವಾಸ, ಆರ್. ದಿವ್ಯಾ ನವೀನ್, ಚೆಲುವ ಕೃಷ್ಣ, ವಿನಾಯಕ ಪ್ರಸಾದ್, ಸರಗೂರು ಯೂತ್ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಸಹಳ್ಳಿ ನವೀನ್, ಮುಖಂಡರಾದ ಶ್ರೀನಾಥ್, ಶಂಭು, ರಮೇಶ, ರಾಮು, ಸ್ವಾಮಿ, ಮಾರಕಾಂಡಯ್ಯ ಹಾಗೂ ಸಿಬ್ಬಂದಿ ಪಳಿನಿಸ್ವಾಮಿ, ರಾಮು, ಅನಿತಾ ಕುಮಾರಿ, ಶಿವಪ್ರಸಾದ್, ಅರುಣ್, ದಿನೇಶ್, ರಜಿನಿ, ಅರ್ಜುನ್ , ಗಿರೀಶ್ ಇತರರಿದ್ದರು.
ಪೋಟೋ ಕ್ಯಾಪ್ಸನ್..
24 ಎಸ್ ಆರ್ ಜಿ 1.2.3: ಸರಗೂರು ಪಟ್ಟಣದ ಪ್ರವಾಸಿ ಮಂದಿರದ ಪಕ್ಕದಲ್ಲೇ ನಿರ್ಮಿಸಿರುವ ಇಂದಿರಾ ಕ್ಯಾಂಟೀನನ್ನು ಗಣ್ಯರು ಉದ್ಘಾಟಿಸಿದರು. ರಾಧಿಕಾ ಶ್ರೀನಾಥ್, ಶ್ರೀನಿವಾಸ , ಎಸ್.ಕೆ. ಸಂತೋಷ ಕುಮಾರ್, ಶಿವಕುಮಾರ್, ಹೇಮಾವತಿ ರಮೇಶ್, ಚೈತ್ರಾ ಸ್ವಾಮಿ ಇತರರು ಇದ್ದರು.