ಕೆರೂರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಹತ್ತಿರ ಇಂದಿರಾ ಕ್ಯಾಂಟೀನ್ ಕಾಮಗಾರಿಗೆ ಶುಕ್ರವಾರ ಶಾಸಕ ಭೀಮಸೇನ ಚಿಮ್ಮನಕಟ್ಟಿ ಭೂಮಿಪೂಜೆ ನೆರವೇರಿಸಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮದಿ, ಜಿಪಂ ಮಾಜಿ ಸದಸ್ಯ ಡಾ. ಎಂ. ಜಿ. ಕಿತ್ತಲಿ, ಪಪಂ ಉಪಾಧ್ಯಕ್ಷ ಮೋದಿನಸಾಬ ಚಿಕ್ಕೂರ ಇತರರಿದ್ದರು. 
ಜಿಲ್ಲೆ

ಬಡವರಿಗೆ ಇಂದಿರಾ ಕ್ಯಾಂಟಿನ್ ಅನುಕೂಲ

ಕೆರೂರ: ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮೀಣ ಭಾಗದ ಬಡ ಜನರ ಹಸಿವು ನೀಗಿಸುವಲ್ಲಿ ಇಂದಿರಾ ಕ್ಯಾಂಟೀನ್ ಅನುಕೂಲವಾಗಿದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಬಳಿ ಇಂದಿರಾ ಕ್ಯಾಂಟೀನ್ ಹಾಗೂ ವಿವಿಧ ಕಾಮಗಾರಿಗಳಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕೆರೂರ ಪಟ್ಟಣದಲ್ಲಿ ಅಂದಾಜು 87 ಲಕ್ಷ ರೂ. ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಲಿದೆ. ಇದರಿಂದ ಬಡವ, ರೈತ, ನಿತ್ಯ ದುಡಿಯುವ ಕಾರ್ಮಿಕ ವರ್ಗದ ಜನರಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ಡಾ. ಎಂ. ಜಿ. ಕಿತ್ತಲಿ ಮಾತನಾಡಿ, ಶೀಘ್ರ ಕ್ಯಾಂಟೀನ್ ನಿರ್ಮಾಣವಾಗಲಿದ್ದು, ಕೇವಲ 5 ಹಾಗೂ 10 ರೂ. ಕಡಿಮೆ ದರದಲ್ಲಿ ಉಪಾಹಾರ ನೀಡುವ ಈ ಯೋಜನೆ ಜನರಿಗೆ ಉಪಯುಕ್ತವಾಗಲಿದೆ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮದಿ ಮಾತನಾಡಿದರು.

ಪಪಂ ಉಪಾಧ್ಯಕ್ಷ ಮೋದಿನಸಾಬ ಚಿಕ್ಕೂರ, ಪಪಂ ಸದಸ್ಯರಾದ ವಿಠ್ಠಲಗೌಡ ಗೌಡರ, ಪರಶುರಾಮ ಮಲ್ಲಾಡದ, ಶಂಕರ ಕೆಂದೂಳಿ, ಬಸವರಾಜ ಹರಣಶಿಕಾರಿ, ಮುಖಂಡರಾದ ಸದಾನಂದ ಮದಿ, ಸುರೇಶ ಪೂಜೇರಿ, ರಾಜು ಚೋರಗಸ್ತಿ, ಮಂಜು ತಿಮ್ಮಾಪೂರ, ಸತೀಶ ಕ್ಷತ್ರಿ, ಡಾ. ಬಿ.ಕೆ. ಕೋವಳ್ಳಿ, ಅದಾಂನಿ ಯಂಡಿಗೇರಿ, ಗೋಪಾಲ ಪೂಜಾರ, ಶ್ರೀಧರ ಕಾಂಬಳೆ, ನಾಗಪ್ಪ ಚೂರಿ, ಇಮಾಮಸಾಬ ಬಾಗವಾನ, ಪಪಂ ಮುಖ್ಯಾಧಿಕಾರಿ ರಮೇಶ ಮಾಡಬಾಳ ಹಾಗೂ ವಿವಿಧ ಇಲಾಖೆ ಸಿಬ್ಬಂದಿ ಹಾಜರಿದ್ದರು.