ಮಡಿಕೇರಿ: ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಗುರುವಾರ ಸ್ವಾತಂತ್ರ್ಯ ಓಟ ನಡೆಯಿತು.
ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರ ನಿರ್ದೇಶಕ ಪ್ರೊ.ಕೆ.ಎಸ್. ಚಂದ್ರಶೇಖರಯ್ಯ ಮಾತನಾಡಿ, ೭೫ನೇ ಸ್ವಾತಂತ್ರ್ಯೋತ್ಸವದ ಮಹತ್ವದ ಆಚರಣೆಯಲ್ಲಿ ದೇಶದ ನಾಗರಿಕರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವ ಸ್ಪರ್ಧೆಯು ತುಂಬಾ ಉತ್ತಮವಾಗಿದೆ. ಭಾರತದ ಐತಿಹಾಸಿಕ ವೈಭವಕ್ಕೆ ತಕ್ಕಂತೆ ಸಂಭ್ರಮಾಚರಣೆ ನಡೆಯಲಿದೆ ಎಂದರು.
ಜೀವ ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಕೆ. ಧರ್ಮಪ್ಪ, ಯೋಗ ವಿಜ್ಞಾನ ವಿಭಾಗ ಸಂಯೋಜಕ ಡಾ.ಜೆ. ಶ್ಯಾಮಸುಂದರ, ಸಹ ಪ್ರಾಧ್ಯಾಪಕರಾದ ಡಾ. ಚಂದ್ರಶೇಖರ ಗಜಾನನ ಜೋಶಿ, ಸಹಾಯಕ ಪ್ರಾಧ್ಯಾಪಕಿ ಡಾ. ಐ.ಕೆ. ಮಂಜುಳಾ ಮತ್ತಿತರರು ಇದ್ದರು.
ಸ್ವಾತಂತ್ರ್ಯ ಓಟ ಸ್ಪರ್ಧೆಯ ಯುವಕರ ವಿಭಾಗದಲ್ಲಿ ಜಿತನ್ (ಪ್ರಥಮ), ಎಸ್.ಆರ್. ಕಿರಣ್ (ದ್ವಿತೀಯ), ಪ್ರಸಾದ್ (ತೃತೀಯ), ಲಕ್ಷ್ಮಣ್, ಆದರ್ಶ್, ತುಂಗೇಶ್, ಶಾಹಿದ್, ಶೇಷಾದ್ರಿ (ಸಮಾಧಾನಕರ) ವಿಜೇತರಾಗಿದ್ದಾರೆ. ಯುವತಿಯರ ವಿಭಾಗದಲ್ಲಿ ರಕ್ಷಿತಾ ಆಳ್ವಾ (ಪ್ರಥಮ), ಮೋನಿಷಾ ಮುತ್ತಮ್ಮ (ದ್ವಿತೀಯ), ಎಂ.ಬಿ. ಬಿಬಿಷಾ (ತೃತೀಯ), ಟಿ.ಸಿ. ರಶ್ಮಿ, ಎಚ್.ಎಚ್. ದಿವ್ಯ, ಎಚ್. ಆರ್. ಅರ್ಪಿತಾ, ಕೆ.ಎಸ್. ಪೃಥ್ವಿ, ಕೆ.ಜೆ. ಕೃಪಾ (ಸಮಾಧಾನಕಾರ) ಬಹುಮಾನ ಪಡೆದಿದ್ದಾರೆ.