ಹರಪನಹಳ್ಳಿಯ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸಸಿ ನೆಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನ ಆಚರಿಸಲಾಯಿತು. ಪುರಸಭೆ ಮಾಜಿ ಅಧ್ಯಕ್ಷ ಎಚ್.ಎಂ.ಅಶೋಕ, ವೈದ್ಯ ಶಂಕರನಾಯ್ಕ, ಪುರಸಭೆ ಸದಸ್ಯರಾದ ಕಿರಣ್ ಶ್ಯಾನಭಾಗ್, ವಿನಯ ಗೌಳಿ, ತಾರ ಹನುಮಂತಪ್ಪ, ಕೌಟಿ ವಾಗೀಶ್, ಜಿಪಂ ಮಾಜಿ ಸದಸ್ಯೆ ಸುವರ್ಣ ಅರುಂಡಿ ನಾಗರಾಜ, ಬಾಗಳಿ ಕೊಟ್ರೇಶಪ್ಪ ಇದ್ದರು. 
ಜಿಲ್ಲೆ

ಪ್ರಧಾನಿ ಮೋದಿಯಿಂದ ಭಾರತದ ಅಭಿವೃದ್ದಿ ಸಾಧ್ಯ

Gangavati - Desk - Veeresh S Ullagaddi

ಹರಪನಹಳ್ಳಿ: ವಿಶ್ವದ ಮಟ್ಟದಲ್ಲಿ ಭಾರತವನ್ನು ಗುರುತಿಸುವಂತೆ ಮಾಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಗೆ ಸಲ್ಲುತ್ತದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಎಂ.ಅಶೋಕ್ ಹೇಳಿದರು.


ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಭಾನುವಾರ ಸಸಿಗಳನ್ನು ನೆಟ್ಟು, ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ 74ನೇ ಜನ್ಮ ದಿನ ಆಚರಿಸಿ ಮಾತನಾಡಿದರು.


ಪ್ರಧಾನಿ ನರೇಂದ್ರ ಮೋದಿ ಅತ್ಯುತ್ತಮ ಅಭಿವೃದ್ಧಿ ಕಾರ್ಯ ಮಾಡುವುದರಿಂದ ಇಡೀ ವಿಶ್ವವೇ ಮೆಚ್ಚಿದ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಭಾರತ ಆರ್ಥಿಕ, ಸಾಮಾಜಿಕ, ಧಾರ್ಮಿಕವಾಗಿ ಅಭಿವೃದ್ಧಿಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕರೋನಾ ಸಂದರ್ಭದಲ್ಲಿ ಅತ್ಯಂತ ನಿಷ್ಠೆಯಿಂದ ಕಾರ್ಯನಿರ್ವಹಿಸಿ ಜನರ ಪ್ರಾಣ ಉಳಿಸಿದ್ದಾರೆ ಎಂದರು.


ವೈದ್ಯ ಶಂಕರನಾಯ್ಕ, ಪುರಸಭೆ ಸದಸ್ಯರಾದ ಕಿರಣ್ ಶ್ಯಾನಭಾಗ್, ವಿನಯ ಗೌಳಿ, ತಾರ ಹನುಮಂತಪ್ಪ, ಕೌಟಿ ವಾಗೀಶ್, ಜಿಪಂ ಮಾಜಿ ಸದಸ್ಯೆ ಸುವರ್ಣ ಅರುಂಡಿ ನಾಗರಾಜ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬಾಗಳಿ ಕೊಟ್ರೇಶಪ್ಪ, ಮುಖಂಡರಾದ ಬಿ.ವೈ.ವೆಂಕಟೇಶ್, ಮಹೇಶ ಪೂಜಾರ, ಓಂಕಾರಗೌಡ, ಕೆ.ಶಂಕರ, ಅಲೂರು ಶ್ರೀನಿವಾಸ, ರವಿನಾಯ್ಕ, ಬಸವರಾಜ, ರೇಖಾ, ಆದಿತ್ಯ, ಹೊನ್ನಪ್ಪ, ಮ್ಯಾಕಿ ದುರುಗಪ್ಪ ಇದ್ದರು.