ಜಿಲ್ಲೆ

ಲಾರಿ ಮಾಲೀಕರ ಹೋರಾಟಕ್ಕೆ ಇಂಡಿಯನ್​ ವೆಹಿಕಲ್​ ಡ್ರೈವರ್ಸ್​ ಟ್ರೇಡ್​ ಯೂನಿಯನ್​ ಬೆಂಬಲ

ಬೆಂಗಳೂರು: ಡೀಸೆಲ್​, ಟೋಲ್​,ಎಫ್​​​ಸಿ ಶುಲ್ಕ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಫೆಡರೇಷನ್​ ಆಫ್​​​ ಕರ್ನಾಟಕ ಸ್ಟೇಟ್​ ಲಾರಿ ಓನರ್ಸ್​ ಆಂಡ್​ ಏಜೆಂಟ್​ ಅಸೋಸಿಯೇಷನ್​, ಏ.15ರಿಂದ ಕರೆ ಕೊಟ್ಟಿರುವ ಮುಷ್ಕರಕ್ಕೆ ಇಂಡಿಯನ್​ ವೆಹಿಕಲ್​ ಡ್ರೈವರ್ಸ್​ ಟ್ರೇಡ್​ ಯೂನಿಯನ್​ ಬೆಂಬಲ ವ್ಯಕ್ತಪಡಿಸಿದೆ.

ಚಾಲಕರು ವಾಹನಗಳ ಸಂಚಾರ ಬಂದ್​ ಮಾಡಲಿದ್ದಾರೆ. ಡಿಸೇಲ್​ ಬೆಲೆ 7 ತಿಂಗಳಲ್ಲಿ 5 ರೂ. ಏರಿಕೆಯಾಗಿದೆ. ಟೋಲ್​ ದರ ಈಗಾಗಲೇ ದುಬಾರಿಯಾಗಿದ್ದು, ಹೆದ್ದಾರಿಗಳಲ್ಲಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಟೋಲ್​ ದರ ಏರಿಕೆಯಿಂದ ಇನ್ನಷ್ಟು ಸಮಸ್ಯೆಗಳು ಸೃಷ್ಟಿಯಾಗಿವೆ ಎಂದು ಸಂದ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ ಹೇಳಿದರು.

ಏರ್​ಪೋರ್ಟ್​ ಟ್ಯಾಕ್ಸಿ, ಜಲ್ಲಿ,ಮರಳು, ಸೇರಿ ಗೂಡ್ಸ್​ ವಾಹನಗಳು ಬಂದ್​ ಆಗಲಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡೀಸೆಲ್​ ಮೇಲೆ ಅನಗತ್ಯವಾಗಿ ತೆರಿಗೆ ಹೇರಲಾಗುತ್ತಿದ್ದು, ಇದರಿಂದಾಗಿ ಚಾಲಕರು ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ.ಚಾಲಕರ ವೇತನವೂ ಹೆಚ್ಚಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.