ಜಿಲ್ಲೆ

ಯಕ್ಷಗಾನದ ಬಾಲ ಕಲಾವಿದೆ ಈಗ ಇಂಡಿಯನ್ ಸ್ಟಾರ್ ಐಕಾನ್​ ಕಿಡ್​

ಬೆಂಗಳೂರು: ಯಕ್ಷಗಾನ ಕ್ಷೇತ್ರದಲ್ಲಿ ಬಾಲ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಉತ್ತರಕನ್ನಡ ಜಿಲ್ಲೆಯ ತುಳಸಿ ಹೆಗಡೆ ಇನ್ನು ಇನ್ನು ಇಂಡಿಯನ್ ಸ್ಟಾರ್ ಐಕಾನ್​. ಅರ್ಥಾತ್, ಇವರು ಇಂಡಿಯನ್​ ಸ್ಟಾರ್​ ಐಕಾನ್​ ಕಿಡ್ ಅಚೀವರ್ಸ್​ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮಹಾರಾಷ್ಟ್ರದಲ್ಲಿನ ನ್ಯಾಷನಲ್ ಅಕಾಡೆಮಿ ಫಾರ್ ಆರ್ಟ್ ಎಜುಕೇಷನ್​ ಈ ಪ್ರಶಸ್ತಿಯನ್ನು ನೀಡಿದೆ.

ನ್ಯಾಷನಲ್ ಅಕಾಡೆಮಿ ಫಾರ್ ಆರ್ಟ್ ಎಜುಕೇಷನ್​ ಮಾತ್ರವಲ್ಲದೆ ನವಭಾರತ ರಾಷ್ಟ್ರೀಯ ಜ್ಞಾನಪೀಠ ಸಂಸ್ಥೆ, ಸುರಭಿ ಆಲ್ ಇಂಡಿಯಾ ಚೈಲ್ಡ್ ಆರ್ಟ್ ಎಕ್ಸಿಬಿಷನ್ ಸೊಸೈಟಿ, ನ್ಯಾಷನಲ್ ಎಕನಾಮಿಕ್ಸ್ ಗ್ರೋಥ್ ಟೈಮ್ಸ್ ಸಹಯೋಗದಲ್ಲಿ ತುಳಸಿ ಹೆಗಡೆಯ ಆಯ್ಕೆ ಪ್ರಕ್ರಿಯೆ ನಡೆದಿದೆ. ದೇಶಾದ್ಯಂತದ ಮಕ್ಕಳ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಯನ್ನು ಮಾನದಂಡವಾಗಿರಿಸಿ ಈ ಪ್ರಶಸ್ತಿಗೆ ಆಯ್ಕೆ ನಡೆಯುತ್ತದೆ.

ಏಳು ವರ್ಷಗಳಿಂದ ಏಳು ವಿಶ್ವಶಾಂತಿ ಸರಣಿ ಯಕ್ಷನೃತ್ಯ ರೂಪಕಗಳೊಂದಿಗೆ ರಾಜ್ಯ-ಹೊರರಾಜ್ಯ ಹಾಗೂ ವಿದೇಶಗಳಲ್ಲೂ ಈಕೆ ವಿಶ್ವಶಾಂತಿ ಸಂದೇಶವನ್ನು ಯಕ್ಷನೃತ್ಯ ಮೂಲಕ ಸಾರಿದ್ದಾಳೆ. ಮೂರೂವರೆ ವರ್ಷ ವಯಸ್ಸಿನಲ್ಲೇ ತುಳಸಿ ಯಕ್ಷಗಾನ ಕ್ಷೇತ್ರಕ್ಕೆ ಪ್ರವೇಶಿಸಿದ್ದು ವಿಶೇಷ. ಇನ್ನು ಇಂಟರ್​ನ್ಯಾಷನಲ್ ಬುಕ್​ ಆಫ್​ ರೆಕಾರ್ಡ್ಸ್​ನಲ್ಲೂ ತುಳಸಿಯ ವಿಶ್ವಶಾಂತಿ ಸರಣಿ ರೂಪಕಗಳ ಪ್ರಸ್ತುತಿ ಈಗಾಗಲೇ ದಾಖಲಾಗಿದೆ.