ಜಿಲ್ಲೆ

ವಿಕಸಿತ ಭಾರತ ಪ್ರಧಾನಿ ನರೇಂದ್ರ ಮೋದಿ ಸಂಕಲ್ಪ

ನವೀನ ಬಿ.ಎಂ

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಸೇವಾ ಪಾಕ್ಷಿಕ ನಡೆಯುತ್ತಿದ್ದು, ಫಿಟ್ ಇಂಡಿಯಾ ಕಲ್ಪನೆಯೊಂದಿಗೆ ಫಿಟ್ ಇಂಡಿಯಾ ನಮೋ ರನ್ ಆಯೋಜನೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಯುವ ರನ್ ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿ, 2047ಕ್ಕೆ ವಿಕಸಿತ ಭಾರತ ಮಾಡುವ ಸಂಕಲ್ಪದೊಂದಿಗೆ ಪ್ರಧಾನಿ ಮೋದಿ ಮುಂದಾಗಿದ್ದಾರೆ. ಯುವ ಶಕ್ತಿ ಮೇಲೆ ನಂಬಿಕೆ ಇಟ್ಟು ಭಾರತವನ್ನು ನಶೆ ಮುಕ್ತ ಭಾರತ ಮಾಡಲು ಮುಂದಾಗಿದ್ದಾರೆ. ನಶೆಮುಕ್ತ ಭಾರತದೊಂದಿಗೆ ಸಮರ್ಥ ದೇಶ ಕಟ್ಟಬೇಕಿದೆ. ಇದಕ್ಕೆ ಯುವಜನರು ಮಾತ್ರವಲ್ಲ, ಪ್ರತಿಯೊಬ್ಬರು ಪಾಲ್ಗೊಳ್ಳಬೇಕಿದೆ. ಭಾರತ ಅಗ್ರಗಣ್ಯ ಸ್ಥಾನದಲ್ಲಿ ನಿಂತು ವಿಶ್ವಗುರು ಆಗಬೇಕಿದೆ ಎಂದರು.

ಯುವಕರಿಗೆ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವಂತೆ ಮತ್ತು ಮಾದಕ ವಸ್ತುಗಳಿಂದ ದೂರವಿರುವಂತೆ ಜನರಲ್ಲಿ ಜಾಗೃತಿ ಮೂಡಿಸಲು ನಶೆಮುಕ್ತ ಭಾರತ ಧೈಯದೊಂದಿಗೆ ದೇಶದ 75 ನಗರಗಳಲ್ಲಿಂದು ನಮೋ ಯುವ ರನ್ ಮ್ಯಾರಾಥನ್ ನಡೆದಿರುವುದು ದಾಖಲೆ ಅಭಿಯಾನವಾಗಿದೆ. - ಬಿ.ವೈ.ರಾಘವೇಂದ್ರ, ಲೋಕಸಭಾ ಸದಸ್ಯ