ಹರಪನಹಳ್ಳಿ ತಾಲೂಕಿನ ಟಿ.ತುಂಬಿಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಧರ್ಮಸಭೆ ಕಾರ್ಯಕ್ರಮದಲ್ಲಿ ಉಜ್ಜಿನಿ ಜಗದ್ಗುರು ಸಿದ್ದಲಿಂಗರಾಜದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು. ಅಡವಿಹಳ್ಳಿಯ ವೀರಗಂಗಾಧರ ಸ್ವಾಮೀಜಿ, ಟಿ.ತುಂಬಿಗೆರೆಯ ಮಹೇಶ್ವರ ಸ್ವಾಮೀಜಿ, ಚಿರಸ್ತಹಳ್ಳಿಯ ಮಲ್ಲಿಕಾರ್ಜುನ ಸ್ವಾಮೀಜಿ, ರೇಣುಕಾಸ್ವಾಮಿ ಕಲ್ಮಠ, ಗ್ರಾಂಪಂ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷ ಮಲ್ಲಪ್ಪ, ಸದಸ್ಯ ವೆಂಕಟೇಶ ಇತರರಿದ್ದರು. 
ಜಿಲ್ಲೆ

ಭಾರತದ ಸಂಸ್ಕೃತಿ ಇತರ ರಾಷ್ಟ್ರಗಳಿಗೆ ಮಾದರಿ

ಹರಪನಹಳ್ಳಿ: ಸನಾತನ ಧರ್ಮ-ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಉಜ್ಜಿನಿ ಜಗದ್ಗುರು ಸಿದ್ದಲಿಂಗರಾಜದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ತಾಲೂಕಿನ ಟಿ.ತುಂಬಿಗೆರೆ ಗ್ರಾಮದಲ್ಲಿ ಆಂಜನೇಯ ದೇವಸ್ಥಾನದ ರಾಜಗೋಪುರ, ಕಳಸಾರೋಹಣ, ಅಡ್ಡಪಲ್ಲಕಿ ಮಹೋತ್ಸವ ಹಾಗೂ ಜನಜಾಗೃತಿ ಧರ್ಮಸಭೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಗುರುವಾರ ಮಾತನಾಡಿದರು.

ಭಾರತ ಹಲವು ವೈಶಿಷ್ಟ್ಯತೆಯಿಂದ ಕೂಡಿದ್ದು, ಇಲ್ಲಿನ ಸಂಸ್ಕೃತಿಯನ್ನು ವಿಶ್ವದ ಅನೇಕ ರಾಷ್ಟಗಳು ಗೌರವಿಸುತ್ತಾ ಬಂದಿವೆ. ಸಮಾಜ ಧರ್ಮ, ದೇವರು ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟಾಗಬೇಕು. ತಂದೆ-ತಾಯಿಯನ್ನು ದೇವರ ಸ್ವರೂಪದಲ್ಲಿ ಆರಾಧಿಸುತ್ತೇವೆ ಇಂತಹ ಸಂಸ್ಕೃತಿ-ಸಂಸ್ಕಾರ ಉಳಿದಿರುವುದು ಭಾರತದಲ್ಲಿ ಮಾತ್ರ. ಟಿ.ತುಂಬಿಗೆರೆ ಚಿಕ್ಕ ಗ್ರಾಮಸ್ಥರು ಒಗ್ಗೂಡಿ ದೇವಸ್ಥಾನಗಳ ನಿರ್ಮಾಣದ ಜೊತೆಗೆ ಗೋಪುರ ನಿರ್ಮಿಸಿ ಕಳಸಾರೋಹಣ ನೆರವೇರಸಿರುವುದು ಉತ್ತಮ ಕಾರ್ಯ ಎಂದರು. ದುಗ್ಗಾವತಿ ಹಿರೇಮಠದ ವೀರಭದ್ರ ಸ್ವಾಮೀಜಿ ಮಾತನಾಡಿದರು.