ತೇರದಾಳ ಪುರಸಭೆಯಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿರಾದಾರಪಾಟೀಲ ಪ್ರತಿಜ್ಞಾವಿಧಿ ಬೋಧಿಸಿದರು. ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ ಇತರರಿದ್ದರು. 
ಜಿಲ್ಲೆ

ಭಾರತದ ಸಂವಿಧಾನ ಹಲವು ರಾಷ್ಟ್ರಗಳಿಗೆ ಮಾದರಿ

Vijayapura - Desk - Gurappa Lokuri

ತೇರದಾಳ: ಭಾರತೀಯ ಸಂವಿಧಾನ ಜಗತ್ತಿನ ಹಲವು ರಾಷ್ಟ್ರಗಳಿಗೆ ಮಾದರಿಯಾಗಿದೆ. ಅಂತಹ ಸಂವಿಧಾನವನ್ನು ದೇಶದ ನಾಗರಿಕರಿಗೆ ವರದಾನವಾಗಿ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಕಾಳಜಿ ಶ್ಲಾಘನೀಯವಾಗಿದೆ ಎಂದು ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ ಹೇಳಿದರು.

ಪುರಸಭೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ದೇಶದ ಸಂವಿಧಾನವನ್ನು ಪ್ರತಿಯೊಬ್ಬ ನಾಗರಿಕ ಗೌರವಿಸಬೇಕು. ಸಂವಿಧಾನ ರಚನೆಯಿಂದಲೇ ನಾವು ಇಂದು ನಮ್ಮ ಹಕ್ಕು ಪಡೆಯಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.

ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿರಾದಾರಪಾಟೀಲ ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಕಂದಾಯ ಅಧಿಕಾರಿ ಎಸ.ಬಿ. ಗಿಡ್ಡಿ, ಪ್ರಾತಪ ಕೊಡುಗೆ, ಅಭಿಯಂತರಿ ಭಾಗ್ಯಶ್ರೀ ಪಾಟೀಲ, ಮಹಾದೇವಿ ಮರೆಗುದ್ದಿ, ಗೌರಿ ಮಾಲಾಪುರ, ಶಂಕರ ಕುಂಬಾರ, ಮುರುಗೇಶ ಮಿರ್ಜಿ, ಸಂಜಯ ದೊಡಮನಿ, ಅಭಿನಂದನ ಬನ್ನಿಕೊಪ್ಪ, ಸದಾಶಿವ ತೆಳಗಿನಮನಿ, ವಿಷ್ಣು ಮತ್ತಿತರಿದ್ದರು.