ವಿಜಯವಾಣಿ ಸುದ್ದಿಜಾಲ ಧಾರವಾಡ
ಸಾರ್ವಜನಿಕ ಬದುಕಿನ ಮೇರು ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಸಂಸ್ಥೆ ಭಾರತೀಯ ಸಾಧಕರ ವೇದಿಕೆ ಕೊಡಮಾಡುವ 2025ರ ಸಾಲಿನ `ಭಾರತೀಯ ಸಾಧಕರ ಪ್ರಶಸ್ತಿ'ಗೆ ಜಾರ್ಖಂಡ್ ರಾಜ್ಯದ ರಾಂಚಿಯ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ರಾಮಚಂದ್ರ ಪಾಟೀಲ ಭಾಜನರಾಗಿದ್ದಾರೆ. ಧಾರವಾಡ ಮೂಲದ ಡಾ. ಪಾಟೀಲ ಅವರು ನಗರದ ಮಕ್ಕಳ ಸಾಹಿತಿ ಹಾಗೂ ಡಯಟ್‌ನ ವಿಶ್ರಾಂತ ಉಪನ್ಯಾಸಕ ದಿ. ರಾಮಚಂದ್ರ ಪಾಟೀಲ ಅವರ ಪುತ್ರ.