ನ್ಯಾಮತಿ: ಜಗತ್ತಿನ ವೈದ್ಯಕೀಯ, ವಿಜ್ಞಾನ, ತಂತ್ರಜ್ಞಾನದಂತಹ ಬೆಳವಣಿಗೆಯಲ್ಲಿ ಭಾರತದ ಕೊಡುಗೆ ಅಪಾರವಾಗಿದ್ದು, ಭಾರತವು ಜಗತ್ತಿನ ಮಾಹಿತಿ ತಂತ್ರಜ್ಞಾನದ ತಾಯಿ ಇದ್ದಂತೆ ಎಂದು ಮಹಾತಪಸ್ವಿ ಶೀಲಾ ಸಂಪಾದನ ಗೋಣಿಬೀಡು ಮಠದ ಸಿದ್ದಲಿಂಗ ಮಹಾಸ್ವಾಮಿ ಹೇಳಿದರು.
ತಾಲೂಕಿನ ಚಿನ್ನಿಕಟ್ಟೆ ಗ್ರಾಮದ ಹೊರ ಹೊಲಯದ ಶ್ರೀಗುರು ರುದ್ರಸ್ವಾಮಿ ಕಲ್ಮಠದಲ್ಲಿ ಅನ್ನದಾನಯ್ಯ ಕರ್ತೃಗದ್ದುಗೆಗೆ ಮಹಾ ರುದ್ರಾಭಿಷೇಕ, ಗಂಗಾಪೂಜೆ, ಮುತ್ತೈದೆಯರಿಗೆ ಬಾಗಿನ ಅರ್ಪಣೆ ಹಾಗೂ ಶ್ರಾವಣ ಸಂಭ್ರಮದ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.
ಸಮಯವೆಂಬುದು ಜೀವನದಲ್ಲಿ ಬಹಳ ಮುಖ್ಯ. ಬದುಕ್ಕಿದಷ್ಟು ಸಮಯಕ್ಕೆ ಅರ್ಥ ಸಿಗಬೇಕಾದರೆೆ ಭಗವಂತನ ಧ್ಯಾನ, ಪೂಜೆ, ಸಂಸ್ಕಾರಗಳ ಸತ್ಸಂಗಗಳಲ್ಲಿ ತೊಡಗಿಕೊಳ್ಳಬೇಕು ಎಂದರು.
ಮನುಷ್ಯ ಆಸ್ಪತ್ರೆಗೆ ದಾಖಲಾಗಿ ಚಿಕ್ಸಿತೆ ಪಡೆದು ಹೊರಬಂದಾಗ ತನ್ನ ದೇಹದ ಬೆಲೆ ತಿಳಿಯುತ್ತದೆ. ಆಗಾಗಿ, ಇದ್ದಷ್ಟು ದಿನ ಒಳ್ಳೆಯ ಆಹಾರ ಸೇವನೆ, ಉತ್ತಮ ಆಲೋಚನೆ ಮಾಡಿ ಎಂದರು.
ಅಧ್ಯಕ್ಷತೆಯನ್ನು ಚಿನ್ನಿಕಟ್ಟೆ ಗುರುರುದ್ರ ಸ್ವಾಮಿ ಕಲ್ಮಠದ ನಿರಂಜನ ಸ್ವಾಮಿಗಳು ವಹಿಸಿದ್ದರು. ಎ.ಜೆ. ಶಿವನಗೌಡರು, ರವಿ, ಎಚ್.ಎಂ. ಶಿವರಾಜ್, ಶಾರದಾ ಪರಮೇಶ್ವರಪ್ಪ, ಅಕ್ಕಮಹಾದೇವಿ, ಗೌರಿ ಗಿರೀಶ್, ಎಚ್.ಎನ್. ಸದಾಶಿವಯ್ಯ, ಪ್ರದೀಪ್, ಶಿವಪ್ರಕಾಶ್, ಶಂಕರಯ್ಯ, ನವೀನ್, ಮೋಹನ್, ರಾಜಪ್ಪ, ವಿನಯ್, ರೇಣುಕಸ್ವಾಮಿ ಇತರರು ಇದ್ದರು.