ಜಿಲ್ಲೆ

ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಗೆಲುವು : ಮೈಸೂರಿನಲ್ಲಿ ಸಂಭ್ರಮಾಚರಣೆ

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ-20 ವಿಶ್ವ ಕಪ್‌ನಲ್ಲಿ ಭಾನುವಾರ ಭಾರತ ಎದುರಾಳಿ ಪಾಕಿಸ್ತಾನದ ವಿರುದ್ಧ ರೋಚಕ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದ ಹಿನ್ನೆಲೆಯಲ್ಲಿ ನಗರದ ಜನರು ಸಿಹಿ ಹಂಚಿ ಸಂಭ್ರಮಿಸಿದರು.

ನಗರದ ಚಾಮುಂಡಿಪುರಂ ವೃತ್ತದಲ್ಲಿ ಭಾರತದ ಧ್ವಜವನ್ನು ಹಿಡಿದು ಜೈಕಾರ ಹಾಕಿ ಸಿಹಿ ಹಂಚಿ ನಂತರ ಪಟಾಕಿ ಸಿಡಿಸಿ ಸಂಭ್ರಮಾಚರಿಸಲಾಯಿತು. ಈ ಸಂದರ್ಭ ಸ್ಥಳೀಯರಾದ ಬಸವರಾಜ್ ಬಸಪ್ಪ ,ಮಧು ಎನ್ ಪೂಜಾರ್, ಯದುನಂದ, ನಂದೀಶ್, ಹೊಯ್ಸಳ ರಂಗನಾಥ್, ಮಂಜುನಾಥ, ಅನಿಲ್ ಕುಮಾರ್, ನಾರಾಯಣ ಬಾಬು, ಪ್ರಮೋದ್, ಅಪೂರ್ವ ಸುರೇಶ್ ಹಾಗೂ ಇತರರು ಪಾಲ್ಗೊಂಡಿದ್ದರು.