ಜಿಲ್ಲೆ

ಧಾರ್ಮಿಕ ತಳಹದಿಯ ಮೇಲೆ ನಿಂತಿದೆ ಭಾರತ

ಜಿ.ಹೆಚ್. ಧನ್ಯಕುಮಾರ್

ಎನ್.ಆರ್.ಪುರ: ಭಾರತ ಧಾರ್ಮಿಕ ತಳಹದಿಯ ಮೇಲೆ ನಿಂತಿದ್ದು , ಯಾರೂ ಧರ್ಮದ ರಕ್ಷಣೆ ಮಾಡುತ್ತಾರೋ ಅವರನ್ನು ಧರ್ಮವೇ ರಕ್ಷಿಸುತ್ತದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಮಡಬೂರಿನ ದಾನಿವಾಸ ದುಗಾರ್ಂಬ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸುರುವ ಭೋಜನ ಶಾಲೆ ಉದ್ಘಾಟನೆ, ಹರಕೆ ಮನೆ ಶಂಕುಸ್ಥಾಪನೆ ಹಾಗೂ ಗೌರವ ಸಮರ್ಪಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ ಇರುವ ಎಲ್ಲ ಧರ್ಮ, ಜಾತಿ, ಜನಾಂಗಗಳು ಧರ್ಮ ಗುರುಗಳ ಮಾರ್ಗದರ್ಶನದಿಂದ ಒಟ್ಟಾಗಿದ್ದಾರೆ. ಆದರೆ, ಪ್ರಪಂಚದ ಯಾವ ದೇಶದಲ್ಲೂ ನಮ್ಮ ದೇಶದಂತೆ ಶಾಂತಿಯ ವಾತಾವರಣವಿಲ್ಲ. ನಮ್ಮ ಪೂರ್ವಿಕರು ಹಾಗೂ ಹಿರಿಯರ ಹೆಸರಿನಲ್ಲಿ ನೀಡುವ ದಾನದಿಂದ ಅವರ ಹೆಸರನ್ನು ಶಾಶ್ವತವಾಗಿಡುವ ಕೆಲಸವನ್ನು ದಾನಿಗಳು ಮಾಡಿದ್ದಾರೆ ಎಂದರು.

ಅಮ್ಮ ಫೌಂಡೇಷನ್ ಅಧ್ಯಕ್ಷ ಸುಧಾಕರ್.ಎಸ್.ಶೆಟ್ಟಿ ಮಾತನಾಡಿ, ಹಿಂದಿನ ಕಾಲದಲ್ಲಿ ಹಣ ಇದ್ದವರು ಶಾಲೆ, ದೇವಸ್ಥಾನಗಳಿಗೆ ಜಮೀನು ದಾನ ಮಾಡುತ್ತಿದ್ದರು. ಮಡಬೂರಿನ ವನಮಾಲಮ್ಮ ಅವರು ಭೋಜನ ಶಾಲೆಗೆ 10 ಲಕ್ಷ ರೂ. ನೀಡಿದ್ದಾರೆ. ಅವರ ಹೆಸರು ಸಮಾಜದಲ್ಲಿ ಶಾಶ್ವತವಾಗಿ ಉಳಿಯಲಿದೆ. ದಾನ ಕೊಡುವ ಮನಸ್ಸು ಬಂದಾಗ ದಾನ ನೀಡಬೇಕು. ಆದರೆ, ದಾನ ನೀಡುವಾಗ ಅಪಾತ್ರರಿಗೆ ನೀಡಬಾರದು ಎಂದರು.

ದ್ವಾರಮಕ್ಕಿ ಶ್ರೀರಾಘವ ಲಕ್ಷ್ಮಣಗೌಡ ಭೋಜನ ಶಾಲೆಗೆ 10 ಲಕ್ಷ ರೂ. ದಾನ ನೀಡಿದ ಮಡಬೂರು ಎಂ.ಬಿ.ವನಮಾಲಮ್ಮಲಕ್ಷ್ಮಣ ಗೌಡ ಹಾಗೂ ಇತರ ದಾನಿಗಳನ್ನು ಗೌರವಿಸಲಾಯಿತು. ದಾನಿವಾಸ ಶ್ರೀ ದುಗಾರ್ಂಬ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಸಿ.ದಿವಾಕರ, ಮುತ್ತಿನಕೊಪ್ಪ ಗ್ರಾಪಂ ಅಧ್ಯಕ್ಷೆ ನೀಲಮ್ಮ, ದಾನಿ ಎಂ.ಬಿ.ವನಮಾಲ ಲಕ್ಷ್ಮಣಗೌಡ, ದಾನಿವಾಸ ಶ್ರೀದುಗಾರ್ಂಬ ದೇವಸ್ಥಾನದ ಸಮಿತಿ ಸದಸ್ಯರಾದ ಎಸ್.ಎಸ್.ಶಾಂತಕುಮಾರ್, ಎಲ್.ಎಂ.ಸತೀಶ್, ಎಚ್.ಸಿ.ಪ್ರವೀಣ್, ಜಿ.ಟಿ.ಸೋಮಣ್ಣ, ಎನ್.ಕೆ.ಕಿರಣ್, ಬಿ.ಟಿ.ಪ್ರಕಾಶ್,ಸತೀಶ್ ಇದ್ದರು.