ಬೆಳಗಾವಿ: ಭಾರತೀಯ ಸಾಂಪ್ರದಾಯಿಕ ಔಷಧ ಪದ್ಧತಿಗಳು ಜಾಗತಿಕ ಸ್ವೀಕಾರಾರ್ಹತೆ, ವೈಜ್ಞಾನಿಕ ಪರಿಶೀಲನೆಗೆ ತೆರೆದುಕೊಳ್ಳುವ ಅಗತ್ಯವಿದೆ ಎಂದು ಜೆಎನ್‌ಎಂಸಿ ಶರೀರಶಾಸದ ಪ್ರಾಧ್ಯಾಪಕ ಡಾ. ಶಿವಪ್ರಸಾದ ಗೌಡರ ಹೇಳಿದರು.
ಬೆಳಗಾವಿಯ ಐಸಿಎಂಆರ್-ಎನ್‌ಐಟಿಎಂನಲ್ಲಿ ಆಯೋಜಿಸಿರುವ ‘ಔಷಧ ಪರೀಕ್ಷಣಾ ಕಾರ್ಯಾಗಾರ’ವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಸಾಂಪ್ರದಾಯಿಕ ಔಷಧಗಳಿಗೆ ಜಾಗತಿಕವಾಗಿ ಬೇಡಿಕೆ ಹೆಚ್ಚುತ್ತಿರುವ ಕಾರಣ ಕ್ಲಿನಿಕಲ್ ಪ್ರಯೋಗದ ಈ ತರಬೇತಿ ಸೂಕ್ತವಾಗಿದೆ ಎಂದರು.
ಚೆನ್ನೆನ ಐಸಿಎಂಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಾರ್ ರಿಸರ್ಚ್ ಇನ್‌ಟ್ಯೂಬರ್ ಕ್ಯುಲೋಸಿಸ್ ನಿರ್ದೇಶಕಿ ಡಾ. ಪದ್ಮಪ್ರಿಯದರ್ಶಿನಿ ಮಾತನಾಡಿ, ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳ ಕ್ಲಿನಿಕಲ್ ಪ್ರಯೋಗಗಳು ಪ್ರಸ್ತುತ ಅಗತ್ಯವಾಗಿದ್ದು, ಆಸಕ್ತಿ, ಪರಿಶ್ರಮ, ತಾಳ್ಮೆ, ಹಣದ ಅವಶ್ಯವಿದೆ ಎಂದರು.
ನವದೆಹಲಿಯ ಐಸಿಎಂಆರ್ ಕ್ಲಿನಿಕಲ್ ಟ್ರಯಲ್ ಯೂನಿಟ್ ಮುಖ್ಯಸ್ಥ ಡಾ. ಅಪರ್ಣಾ ಮುಖರ್ಜಿ, ಗುಣಮಟ್ಟದ ಕ್ಲಿನಿಕಲ್ ಟ್ರಯಲ್ ಪ್ರಸ್ತಾವನೆಗಳ ಅಗತ್ಯತೆ ಮತ್ತು ಉತ್ತಮ ಕ್ಲಿನಿಕಲ್ ಪ್ರಯೋಗಗಳಿಗೆ ಐಸಿಎಂಆರ್‌ನ ಧನಸಹಾಯ ಬೆಂಬಲ ಖಾತ್ರಿಪಡಿಸಿದರು.
ಐಸಿಎಂಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆ್ ಟ್ರೆಡಿಷನಲ್ ಮೆಡಿಸಿನ್‌ನ ನಿರ್ದೇಶಕ ಡಾ. ಸುಬರ್ನಾ ರಾಯ್ ಪ್ರಾಸ್ತಾವಿಕ ಮಾತನಾಡಿದರು.
ಮಾಡರ್ನ್ ಮೆಡಿಸಿನ್, ಆಯುರ್ವೇದ, ಹೋಮಿಯೋಪಥಿ, ಯೂನಾನಿ, ಬೇಸಿಕ್ ಸೈನ್ಸಸ್ ಮತ್ತು ಾರ್ಮಸಿ ವಿಭಾಗದ 11 ರಾಜ್ಯಗಳ 50 ತಜ್ಞರು, ಸಂಶೋಧಕರು ಪಾಲ್ಗೊಂಡಿದ್ದಾರೆ. ಶುಕ್ರವಾರವೂ ಕಾರ್ಯಾಗಾರ ನಡೆಯಲಿದ್ದು, ಸರ್ಕಾರಿ ಮತ್ತು ಖಾಸಗಿ ಮಾಧ್ಯಮಿಕ ಕಾಲೇಜುಗಳು, ಆಸ್ಪತ್ರೆಗಳು ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಕ್ಲಿನಿಕಲ್ ಪ್ರಯೋಗಗಳಿಗೆ ಅನುಕೂಲವಾಗಲಿದೆ ಎಂದು ಆಯೋಜಕರು ತಿಳಿಸಿದರು. ಡಾ. ಕಮ್ರಾನ್ ಜಮಾನ್, ಸೌಮಿಕಾ ಘೋಸಲ್ ಕಾರ್ಯಕ್ರಮ ನಡೆಸಿಕೊಟ್ಟರು, ಡಾ.ಹರ್ಷ ಹೆಗ್ಡೆ ವಂದಿಸಿದರು.