ಕಂಪ್ಲಿ: ತಾಲೂಕಿನ ಬಳ್ಳಾಪುರ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 147ನೇ ಜನ್ಮದಿನ ನಿಮಿತ್ತ ರಾಷ್ಟ್ರೀಯ ಏಕತಾ ದಿನಾಚರಣೆಯನ್ನು ಗುರುವಾರ ಆಚರಿಸಲಾಯಿತು.
ಶಿಕ್ಷಕ ಆದೀಶ ಜವಳಿ ಮಾತನಾಡಿ, ಭಾರತದ ಸ್ವಾತಂತ್ರ್ಯದ ಹೋರಾಟ, ಏಕತೆಗೆ ಪಟೇಲರ ಕೊಡುಗೆ ಮಹತ್ವದ್ದಾಗಿದೆ. ಭಾರತದ ನಾನಾ ಧರ್ಮ, ಜಾತಿ, ಬುಡಕಟ್ಟು, ಭಾಷೆಗಳಿಂದ ಕೂಡಿದ್ದರೂ ಭಾರತೀಯರೆಲ್ಲರೂ ಒಂದೇ ಎಂಬ ಐಕತ್ಯೆಗೆ ಹೆಸರುವಾಸಿಯಾಗಿದೆ.
ಏಕತಾ ದಿನಾಚರಣೆ ಮೂಲಕ ರಾಷ್ಟ್ರದ ಜನತೆಯಲ್ಲಿ ಏಕತೆ, ಸಮಗ್ರತೆ, ಸಹೋದರತೆಯನ್ನು ಜಾಗೃತಗೊಳಿಸಲಾಗುವುದು. ಮಕ್ಕಳೆಲ್ಲರೂ ಏಕತೆಯ ಭಾವ ತಳೆಯುವಲ್ಲಿ ಮುಂದಾಗಬೇಕು ಎಂದರು. ಮುಖ್ಯ ಶಿಕ್ಷಕಿ ಎಂ.ವೀಣಾ, ಶಿಕ್ಷಕರಾದ ಎಚ್.ರಮೇಶ, ಶಂಕ್ರಮ್ಮ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕೋರಿ ಶ್ರೀದೇವಿ ನಿರೂಪಿಸಿದರು.