ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಶಾಖೆಯ ವಾಯುಪಡೆಯ ಸಂಘಟನೆಯ (ಎಎಫ್‌ಎ) ಸಹಯೋಗದಲ್ಲಿ ನಗರದ ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ಭಾರತೀಯ ವಾಯುಪಡೆಯ (ಎಎಫ್‌ಎ) 92ನೇ ವಾರ್ಷಿಕೋತ್ಸವ ಆಚರಿಸಲಾಯಿತು.
ಎಎಫ್‌ಎ ಹುಬ್ಬಳ್ಳಿ-ಧಾರವಾಡ ಶಾಖೆ ಉಪಾಧ್ಯಕ್ಷ ವಾಯುಪಡೆ ಅಧಿಕಾರಿ ಸಿ.ಎಸ್. ಹವಾಲ್ದಾರ ಮಾತನಾಡಿ, ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಆತ್ಮ ನಿರ್ಭರ ಭಾರತ ಮತ್ತು ಮೇಕ್‌ಇನ್ ಇಂಡಿಯಾ ಉಪಕ್ರಮದಿಂದ ಭಾರತ ಸ್ವಾವಲಂಬನೆ ಸಾಧಿಸಿದೆ. ರಕ್ಷಣಾ ಕ್ಷೇತ್ರದಲ್ಲಿಯೂ ತ್ರಿವಿಕ್ರಮ ಹೆಜ್ಜೆ ಇಟ್ಟಿದೆ. ಆಧುನಿಕ ಸವಾಲು ಸ್ವೀಕರಿಸಿ ಜಾಗತಿಕ ಮಟ್ಟದಲ್ಲಿ ಭಾರತು ತಲೆ ಎತ್ತಿ ನಿಲ್ಲುವಂತಾಗಿದೆ ಎಂದರು.
ಕಮಾಂಡರ್ ಅರವಿಂದ ಶಿಗ್ಗಾವನವರ ಮಾತನಾಡಿದರು.
ಪ್ರಾಚಾರ್ಯ ಡಾ. ಮನು ಟಿ.ಎಂ. ಅಧ್ಯಕ್ಷತೆ ವಹಿಸಿದ್ದರು. ಗ್ಯಾಲಂಟ್ರಿ ಪ್ರಶಸ್ತಿ ಪಟೆದ ಸರ್ಜೆಂಟ್ ಶಶಿಧರ ಪ್ರಸಾದ ಅವರನ್ನು ಗೌರವಿಸಲಾಯಿತು.