ಜಾವಳ್ಳಿಯ ಜ್ಞಾನದೀಪ ಶಾಲೆಯಲ್ಲಿ ಆಯೋಜಿಸಿದ್ದ ಕೌಶಿಕ-ಕೌತುಕ ಸಂವಾದ ಕಾರ್ಯಕ್ರಮದಲ್ಲಿ ಪಿಜಿಆರ್ ಸಿಂಧ್ಯಾ ಅವರನ್ನು ಸನ್ಮಾನಿಸಲಾಯಿತು. ಎಚ್.ಪರಮೇಶ್ವರ್, ಪ್ರಕಾಶ್ ತಲವಾನೆ, ಶ್ರೀಕಾಂತ್ ಎಂ.ಹೆಗಡೆ, ವಿ.ರಾಜೇಶ್, ಡಾ. ಕೆ.ನಾಗರಾಜ್ ಇತರರಿದ್ದರು. 
ಜಿಲ್ಲೆ

ವೇಗವಾಗಿ ಬೆಳೆಯುತ್ತಿದೆ ಭಾರತ

Shivamogga - Desk - Praveena Kumar S

ಹೊಳೆಹೊನ್ನೂರು: ನಮ್ಮ ದೇಶದಲ್ಲಿ ಕೆಲವು ವಿಭಾಗಗಳಲ್ಲಿ ತನ್ನದೇ ಆದ ಸಮವಸ್ತ್ರವನ್ನು ಹೊಂದಿದ್ದು ಇದರ ಉದ್ದೇಶ ಎಲ್ಲರೂ ಸಮಾನತೆಯಿಂದ ಕೂಡಿರಬೇಕು ಎಂಬುದು ಎಂದು ಪೋಕ್ರಾನ್ ಅಣ್ವಸ್ತ್ರ ಸ್ಫೋಟ-2ರ ವೇಳೆ ಭದ್ರತಾ ಉಸ್ತುವಾರಿ ಹೊತ್ತಿದ್ದ ಕರ್ನಲ್ ಗೋಪಾಲ್ ಟಿ.ಕೌಶಿಕ್ ತಿಳಿಸಿದರು.
ಜಾವಳ್ಳಿಯ ಶ್ರೀ ಅರಬಿಂದೋ ಫೌಂಡೇಷನ್ ಫಾರ್ ಎಜುಕೇಷನ್ ಹಾಗೂ ಜ್ಞಾನದೀಪ ಸಂಸ್ಥೆಯಿಂದ ಶನಿವಾರ ಆಯೋಜಿಸಿದ್ದ ಕೌಶಿಕ-ಕೌತುಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ದೇಶದಲ್ಲಿ ನ್ಯೂಕ್ಲಿಯರ್ ಪವರ್ ದೇಶವಾಗಿರುವ ಸಂದರ್ಭದಲ್ಲಿ ನಾನು ಭಾಗವಹಿಸಿದ್ದು ನನ್ನ ಜೀವನದ ಅತ್ಯಂತ ಮಹತ್ವ ಕ್ಷಣಗಳಲ್ಲಿ ಒಂದಾಗಿದೆ. ರಾಷ್ಟ್ರ ಯಾವುದೇ ಯೋಜನೆಯೂ ಕೇವಲ ಅದರ ಕೋಡ್‌ಗಳು ಮುಖ್ಯ ಪಾತ್ರವನ್ನು ವಹಿಸುತ್ತವೆ. ಇದರಿಂದಾಗಿ ರಾಷ್ಟ್ರದ ರಹಸ್ಯವನ್ನು ಗುಪ್ತವಾಗಿಡಲು ಸಾಧ್ಯವಾಗುವುದು ಎಂದರು.
ನಮ್ಮ ದೇಶ ವಿಜ್ಞಾನ, ತಂತ್ರಜ್ಞಾನ ಹಾಗೂ ಮಿಲಿಟರಿ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿದ್ದು ಇನ್ನೂ ಕೆಲವೇ ವರ್ಷಗಳಲ್ಲಿ ಪ್ರಪಂಚದಲ್ಲೇ ನಾವು ಉತ್ತಮ ಸ್ಥಿತಿಗೆ ತಲುಪುವುದರಲ್ಲಿ ಯಾವುದೇ ಸಂದೇಹವಿಲ್ಲ. ವಿದ್ಯಾರ್ಥಿಗಳು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ದೇಶದ ಉದ್ಧಾರಕ್ಕಾಗಿ ಜೀವನವನ್ನು ಮುಡುಪಾಗಿಡಬೇಕು ಎಂದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ರಾಜ್ಯದ ಮುಖ್ಯಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಸ್ಕೌಟ್ಸ್ ಮತ್ತು ಗೈಡ್ಸ್ನಿಂದಾಗಿ ಜೀವನದಲ್ಲಿ ಶಿಸ್ತು ಪರಿಪಾಲನೆ ಬರುವುದು. ನಾವೆಲ್ಲ ಭಾರತೀಯರು ಎಂಬ ಭಾವನೆ ಮೂಡುತ್ತದೆ. ಮನುಷ್ಯ ಕೆಟ್ಟ ಕಾಲ ಬಂದಾಗ ಕೆಟ್ಟ ಕೆಲಸ ಮಾಡುತ್ತಾನೆ. ವಿನಾಶ ಕಾಲೇ ವಿಪರೀತ ಬುದ್ಧಿ ಎನ್ನುವಂತಾಗುತ್ತದೆ. ಆದ್ದರಿಂದ ಜೀವನದಲ್ಲಿ ತಾಳ್ಮೆ ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಶಿವಮೊಗ್ಗ ಅವಲಕ್ಕಿ ಮಲ್ನಾಡ್ ಓಪನ್‌ಗ್ರೂಪ್ ನಿರ್ದೇಶಕ ವಿ.ರಾಜೇಶ್‌ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನದೀಪ ವಿದ್ಯಾಸಂಸ್ಥೆಯ ಅಧ್ಯಕ್ಷ ತಲವಾನೆ ಪ್ರಕಾಶ ವಹಿಸಿದ್ದರು. ಪ್ರಾಚಾರ್ಯ ಶ್ರೀಕಾಂತ ಎಂ.ಹೆಗಡೆ, ಮಲ್ನಾಡ್ ಓಪನ್ ಗ್ರೂಪ್‌ನ ಎಚ್.ಪರಮೇಶ್ವರ್, ಜ್ಞಾನದೀಪ ಸಂಸ್ಥೆಯ ಕಾರ್ಯದರ್ಶಿ ಬಿ.ಎಲ್.ನೀಲಕಂಠಮೂರ್ತಿ, ಅರಬಿಂದೋ ಕಾಲೇಜಿನ ಪ್ರಾಚಾರ್ಯ ಡಾ. ಕೆ.ನಾಗರಾಜ್, ಹಿರಿಯ ಉಪಪ್ರಾಚಾರ್ಯ ಡಾ. ರೆಜಿ ಜೋಸೇಫ್, ಉಪಪ್ರಾಚಾರ್ಯ ವಾಣಿ ಕೃಷ್ಣಪ್ರಸಾದ ಉಪಸ್ಥಿತರಿದ್ದರು.