ಜಿಲ್ಲೆ

ಕುಲಕಸುಬುದಾರರ ಸಬಲೀಕರಣದಿಂದ ವಿಕಸಿತ ಭಾರತ; ಶೋಭಾ ಕರಂದ್ಲಾಜೆ ಅಭಿಮತ, ಲೆದರ್ ರಿಪೇರ್ ಟೂಲ್ ಕಿಟ್ ವಿತರಣೆ

ಬೆಂಗಳೂರು: 2047ರ ಹೊತ್ತಿಗೆ ದೇಶವು ವಿಕಸಿತ ಭಾರತವಾಗಬೇಕೆಂಬ ಪ್ರಧಾನಿ ಮೋದಿಯವರ ಪರಿಕಲ್ಪನೆ ಸಾಕಾರಗೊಳ್ಳಲು ಕುಲಕಸುಬುಗಳನ್ನು ಮಾಡುವವರ ಸಬಲೀಕರಣ ಅವಶ್ಯತೆ ಇದೆ. ಅದರಿಂದ ವಿಕಸಿತ ಭಾರತ ಸಾಕಾರಗೊಳ್ಳಲಿದೆ ಎಂದು ಕೇಂದ್ರ ಎಂಎಸ್‌ಎಂಇ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಮಲ್ಲೇಶ್ವರದ ಸುವರ್ಣ ಭವನದಲ್ಲಿ ತಚ್ಮು ಜನ್ಮದಿನದ ಸಂದರ್ಭದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಕಮಿಷನ್ (ಕೆವಿಐಸಿ)ನಿಂದ ವಂಶಪಾರಂಪರ್ಯವಾಗಿ ಬಂದಿರುವ 18 ಕುಲಕಸುಬುಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವಕರ್ಮ ಯೋಜನೆಯಡಿ ಗ್ರಾಮೋದ್ಯೋಗ ವಿಕಾಸ ಯೋಜನೆ (ಜಿವಿವೈ) ಅನ್ವಯ ಚಮ್ಮಾರರಿಗೆ ಲೆದರ್ ರಿಪೇರ್ ಟೂಲ್ ಕಿಟ್ ವಿತರಿಸಿ ಮಾತನಾಡಿದರು.

ದೇಶ ಸ್ವತಂತ್ರಗೊಂಡು 2047ಕ್ಕೆ 100 ವರ್ಷಗಳಾಗಲಿದ್ದು, ಆ ವೇಳೆ ಭಾರತ ಸಂಪೂರ್ಣ ಅಭಿವೃದ್ಧಿ ಹೊಂದಬೇಕೆಂಬ ಗುರಿಯನ್ನಿರಿಸಿಕೊಂಡು ಪ್ರಧಾನಿ ಮೋದಿ ವಿಕಸಿತ ಭಾರತ ಎಂಬ ಪರಿಕಲ್ಪನೆಯನ್ನು ೋಷಿಸಿದ್ದಾರೆ. ವಿಕಸಿತ ಭಾರತ ಪರಿಕಲ್ಪನೆ ಸಾಕಾರಗೊಳ್ಳಲು ಕೇವಲ ದೊಡ್ಡ ಕೈಗಾರಿಕೋದ್ಯಮಗಳಷ್ಟೇ ಅಲ್ಲದೆ ಸಣ್ಣ ಗುಡಿಕೈಗಾರಿಕೆಗಳು, ಜಾತಿಯಾಧಾರಿತ ಕುಲಕಸುಬುಗಳ ಪಾತ್ರವೂ ಪ್ರಮುಖವಾಗಿದೆ. ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆಯು ಅಂತಹ 18 ಜಾತಿಯಾಧಾರಿತ ಕಸುಬುದಾರರನ್ನು ಸಬಲೀಕರಣಗೊಳಿಸುವ ಯೋಜನೆಯಾಗಿದೆ. ಇಲ್ಲಿ ತರಭೇತಿ, ಕಿಟ್ ವಿತರಣೆ, ಕಡಿಮೆ ಬಡ್ಡ ದರದಲ್ಲಿ ಸಾಲ ಇತ್ಯಾದಿ ಉಪಕ್ರಮಗಳಿಂದ ಕುಲಕಸುಬುದಾರರಿಗೆ ಸ್ವಾವಲಂಬಿ ಜೀವನ ರೂಪಿಸಲಾಗುತ್ತದೆ. ಅದರ ಭಾಗವಾಗಿ ಕೆವಿಐಸಿಯಿಂದ ಇಂದು ಲೆದರ್ ಟೂಲ್ ಕಿಟ್ ವಿತರಿಸಲಾಗಿದೆ ಎಂದು ಶೋಭಾ ಕರಂದ್ಲಾಜೆ ವಿವರಿಸಿದರು.

ಸಮಾರಂಭದ ಮೊದಲಿಗೆ ಸಚಿವರ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರ ಒತ್ತಾಸೆಯಂತೆ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡರು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳು ಸಚಿವರಿಗೆ ಹೂಗುಚ್ಛ, ವಿವಿಧ ಉಡುಗೊರೆಗಳನ್ನು ನೀಡಿ ಅಭಿನಂದಿಸಿದರು. ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಮಾಜಿ ಉಪ ಮೇಯರ್ ಎಸ್.ಹರೀಶ್, ಎಫ್​ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ, ಎಂಎಸ್‌ಎಂಇ ಅಧಿಕಾರಿಗಳು, ಕೆವಿಐಸಿ ಅಧಿಕಾರಿಗಳು ಉಪಸ್ಥಿತರಿದ್ದರು.