ಅಕ್ಕಿಆಲೂರ: ಸ್ಥಳೀಯ ಸ್ನೇಹಮೈತ್ರಿ ವಿಸ್ಮಯ ಮನಸುಗಳ ಕೇಂದ್ರದಿಂದ ಥರ್ಡ್ ಐ ಆಕ್ಟಿವೇಷನ್ ತರಬೇತಿ ಪಡೆದ ಹಾನಗಲ್ಲ ವಿದ್ಯಾರ್ಥಿನಿ ರಿತಿಕಾ ಗುಡ್ಡದಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಲಭಿಸಿದೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕಡಿಮೆ ಸಮಯದಲ್ಲಿ (9 ನಿಮಿಷಗಳಲ್ಲಿ) 90 ವಸ್ತು ಗುರುತಿಸಿದ ಬಾಲಕಿ ಎಂಬ ದಾಖಲೆಗೆ ರಿತಿಕಾ ಭಾಜನಳಾಗಿದ್ದಾಳೆ. ಕೇವಲ ಐದು ದಿನದಲ್ಲಿ ಸ್ನೇಹಮೈತ್ರಿ ವಿಸ್ಮಯ ಮನಸುಗಳ ಕೇಂದ್ರದಲ್ಲಿ ವಿನೂತಾ ಗೊಂದಿ ಅವರ ಬಳಿ ತರಬೇತಿ ಪಡೆದ್ದಳು.