ಇಂಡಿ: ಪಟ್ಟಣದ ಶಾಂತೇಶ್ವರ ಹಾಗೂ ಹಿರೇಇಂಡಿ ಗ್ರಾಮದ ಹನುಮಾನ ದೇವರ ದೇವಸ್ಥಾನಗಳ ಆಡಳಿತ ಮಂಡಳಿಯವರು ಭಕ್ತರಿಗೆ ದೇವಸ್ಥಾನಗಳ ಆದಾಯ ಮತ್ತು ಖರ್ಚಿನ ವಿವರ ನೀಡಿಲ್ಲ ಎಂದು ಆರೋಪಿಸಿ ಐವತ್ತಕ್ಕೂ ಹೆಚ್ಚು ಭಕ್ತರು ಶನಿವಾರ ಇಂಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ ಕೊನೆಗೆ ಮಿನಿ ವಿಧಾನಸೌಧಕ್ಕೆ ಬಂದು ಎಸಿ ಅಬೀದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಿದರು.
ಈ ಎರಡೂ ದೇವಸ್ಥಾನಗಳ ಆಡಳಿತ ಮಂಡಳಿ ಸರ್ವಾಧಿಕಾರದಿಂದ ವರ್ತಿಸುವುದನ್ನು ಬಿಡಬೇಕು, ಕಲಬುರಗಿ ಉಚ್ಚ ನ್ಯಾಯಾಲಯ ನೀಡಿರುವ ಆದೇಶವನ್ನು ಪಾಲಿಸಬೇಕು. ಆಡಳಿತ ಮಂಡಳಿಗಳ ಕೆಲವು ನಿರ್ದೇಶಕರು ಮರಣ ಹೊಂದಿದ್ದಾರೆ. ಅವರ ಸ್ಥಾನದಲ್ಲಿ ಬೇರೆಯವರನ್ನು ನೇಮಿಸಿಕೊಳ್ಳಬೇಕು.
ಆಡಳಿತ ಮಂಡಳಿ ಲೆಕ್ಕಪತ್ರ ನೀಡುವಲ್ಲಿ ವಿಲರಾಗಿದ್ದಾರೆ. ಇದರ ಬಗ್ಗೆ ಮೇಲಧಿಕಾರಿಗಳು ವಿಶೇಷ ತಂಡವನ್ನು ನೇಮಕ ಮಾಡಿ ಟ್ರಸ್ಟ್ ಬಗ್ಗೆ ತನಿಖೆ ಮಾಡಿಸಬೇಕು. ಈಗಿದ್ದ ಟ್ರಸ್ಟ್ ಮಂಡಳಿ ರದ್ದುಗೊಳಿಸಿ, ಹೊಸ ಆಡಳಿತ ಮಂಡಳಿ ರಚಿಸಬೇಕು. ದೇವಸ್ಥಾನದ ಆವರಣದಲ್ಲಿ ಪ್ರತಿಭಟನೆ ನಡೆದರೂ ದೇವಸ್ಥಾನದ ಜಾತ್ರೆಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದಾರೆ. ಎಲ್ಲ ಸಮಸ್ಯೆಗಳನ್ನು ನಿವಾರಣೆಗೆ ಆಗ್ರಹಿಸಿ ಎಸಿ ಅವರಿಗೆ ಮನವಿ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಶಂಕರಗೌಡ ಪಾಟೀಲ, ವಿನೋದ ಹದಗಲ್ಲ, ಭೀಮನಗೌಡ ಪಾಟೀಲ, ಕಿರಣ ಕಡ್ಲೇವಾಡ, ಮಲ್ಲಪ್ಪ ಹದಗಲ್ಲ, ಬಸು ಪಾಟೀಲ, ನೀಲಕಂಠಗೌಡ ಪಾಟೀಲ, ಅನೀಲ ಝಂಪಾ, ರಾಜು ಕುಲಕರ್ಣಿ, ಮಲ್ಲು ಹಾವಿನಾಳಮಠ, ಸಿದ್ದಣ್ಣ ತಾಂಬೆ, ಭೀಮ ಕಮತಿ, ಸತೀಶ ಹದಗಲ್ಲ, ಮಲ್ಲು ಭಾವಿಕಟ್ಟಿ, ಸಂಜು ಬಳಮಕರ, ಭೀಮರಾಯ ಹದಗಲ್ಲ, ಅನೀಲ ಕಲಕೇರಿ, ರಾಜುಗೌಡ ಪಾಟೀಲ, ಸಚಿನ ಹದಗಲ್ಲ, ಸಾತಪ್ಪ ತೆನಿಹಳ್ಳಿ, ಶ್ರೀಶೈಲ ಪೇಟಸಂಗೆ, ರವಿಗೌಡ ಪಾಟೀಲ, ಕೇದಾರ ಬಾರಿಕಾಯಿ, ಮಹಾದೇವ ಬಾರಿಕಾಯಿ, ಅರುಣ ತೆನಿಹಳ್ಳಿ, ಶಾಂತುಗೌಡ ಬಿರಾದಾರ, ಆಕಾಶ ಗೊಳ್ಳಗಿ, ಸುರೇಶ ಬಾರಿಕಾಯಿ, ಸಚಿನ ಬಿರಾದಾರ, ಚಂದ್ರಕಾಂತ ದೇವರ, ಆಕಾಶ ಕೊಟ್ಟಲಗಿ, ಅಪ್ಪಣ್ಣ ಗೌಳಿ, ಶಿವಾನಂದ ತೆನಿಹಳ್ಳಿ, ಚೆನ್ನು ಬೋಡಿ, ಭೀಮರಾಯ ತೆನಿಹಳ್ಳಿ, ಕಲ್ಲಪ್ಪ ಪತ್ತಾರ ಇತರರಿದ್ದರು.