ಕುಕನೂರು: ಸ್ವಾತಂತ್ರ್ಯದ ಹಾದಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಭಾರತ ಬ್ರಿಟಿಷರ ಅಟ್ಟಹಾಸಕ್ಕೆ ಸಿಲುಕಿ ನಲುಗಿತ್ತು. ಬ್ರೀಟಿಷರ ದಾಸ್ಯದಿಂದ ಮುಕ್ತಿ ಪಡೆದ ದಿನ ಸ್ವಾತಂತ್ರ್ಯ ದಿನವಾಗಿದೆ ಎಂದು ತಹಸೀಲ್ದಾರ ಪ್ರಾಣೇಶ ಹೇಳಿದರು.
ಇದನ್ನೂ ಓದಿ: http://ಸ್ವಾತ್ರಂತ್ರೃ ಹೋರಾಟ ಬಗೆ ತಿಳಿಯಿರಿ
ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ಸ್ವಾತಂತ್ರೃ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಂಗಳವಾರ ಮಾತನಾಡಿದರು.
ಮಹನೀಯರ ಹೋರಾಟದ ಫಲವಾಗಿ ಭಾರತಕ್ಕೆ ಸ್ವಾತಂತ್ರೃ ದೊರಕಿತು.
ಸ್ವಾತಂತ್ರೃ ಹೋರಾಟಗಾರರ ಹೋರಾಟದ ಬಗ್ಗೆ ಅಧ್ಯಯನ ಮಾಡಿ ಅವರು ರಾಷ್ಟ್ರಕ್ಕೆ ನೀಡಿದ ಕೊಡುಗೆ ಬಗ್ಗೆ ತಿಳಿಯಬೇಕು ಎಂದರು.
ಗ್ರೇಡ್-2 ತಹಸೀಲ್ದಾರ ಮುರುಳಿಧರರಾವ ಕುಲಕರ್ಣಿ,
ಪಪಂ ಮುಖ್ಯಾಧಿಕಾರಿ ಸುಬ್ರಮಣ್ಯ, ಶಿರಸ್ತೇದಾರ ಮಹಮ್ಮದ್ ಮುಸ್ತಾಫ್, ನಿವೃತ್ತ ಪ್ರಾಂಶುಪಾಲ ಕೃಷ್ಣ ಕುಲಕರ್ಣಿ, ಕಂದಾಯ ನಿರೀಕ್ಷಕರ ರಂಗನಾಥ, ಭೂಮಿ ಕೇಂದ್ರದ ಅಧಿಕಾರಿ ಶರಣಪ್ಪ ಇಟಗಿ, ಬಸವರಾಜ, ಗಿರೀಶ ಇತರರಿದ್ದರು.
ತಾಲೂಕು ಪಂಚಾಯಿತಿ: ಪಟ್ಟಣದ ತಾಪಂನಲ್ಲಿ ಸ್ವಾತಂತ್ರೃ ದಿನಾಚರಣೆ ನಿಮಿತ್ತ ತಾಪಂ ಇಒ ಸಂತೋಷ ಬಿರಾದಾರ ಧ್ವಜಾರೋಹಣ ನೆರವೇರಿಸಿದರು.
ತಾಪಂ ಸಹಾಯಕ ನಿರ್ದೇಶಕರಾದ ವೆಂಕಟೇಶ ವಂದಾಲ್, ಶರಣಪ್ಪ ಕೆಳಗಿನಮನಿ, ತಾಲೂಕ ಯೋಜನಾಧಿಕಾರಿ ಆನಂದ ಗರೂರ ಇತರರಿದ್ದರು.
ಭಾನಾಪುರ: ತಾಲೂಕಿನ ಭಾನಾಪುರ ಗ್ರಾಮದ ಗ್ರಾಪಂನಲ್ಲಿ ಸ್ವಾತಂತ್ರೃ ದಿನಾಚರಣೆ ನಿಮಿತ್ತ ಗ್ರಾಪಂ ಅಧ್ಯಕ್ಷ ಕರಿಯಪ್ಪ ಹಳ್ಳಿಕೇರಿ ಧ್ವಜಾರೋಹಣ ನೆರವೇರಿಸಿದರು.
ಪಿಡಿಓ ರವಿಕುಮಾರ ಲಿಂಗಣ್ಣನವರ, ಉಪಾಧ್ಯಕ್ಷೆ ಪವಿತ್ರಾ ಪ್ರಕಾಶ ಬಂಗೇರ, ಸದಸ್ಯರಾದ ನೀಲಕಂಠಯ್ಯ ಸಸಿಮಠ, ರಾಮಣ್ಣ ಕೋಮಲಾಪುರ, ರೇಣಮ್ಮ ತಳವಾರ, ಪ್ರಮುಖರಾದ ಯಲ್ಲಪ್ಪ ಮೇಟಿ, ಪ್ರಕಾಶ ಸುಳ್ಳದ, ವಿರುಪಾಕ್ಷಪ್ಪ ಅಂಗಡಿ, ದೇವಪ್ಪ ಮಡಿವಾಳ, ಕಳಕಯ್ಯ ಲಕಮಾಪುರಮಠ ಇತರರಿದ್ದರು.
ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷೆ ರೇಣುಕಮ್ಮ ಕವಲೂರು ಧ್ವಜಾರೋಹಣ ನೆರವೇರಿಸಿದರು. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಈಶ್ವರಯ್ಯ ಬೆಣಕಲ್‌ಮಠ ಅವರು ಧ್ವಜಾರೋಹಣ ನೆರವೇರಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ಪಿಕಾಡ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ, ಎಸ್ಡಿಎಂಸಿ ಉಪಾಧ್ಯಕ್ಷೆ ಅಕ್ಕಮ್ಮ ಹಿರೇಮಠ, ಪ್ರಮುಖರಾದ ಶಾಂತವೀರಯ್ಯ ಲಕಮಾಪುರಮಠ, ಶಂಕ್ರಪ್ಪ ಚೌಡ್ಕಿ ಇತರರಿದ್ದರು.