ನ್ಯಾಮತಿ: ಮಕ್ಕಳಿಗೆ ಚಿಕ್ಕವಯಸ್ಸಿನಿಂದಲೇ ಸ್ವಾವಲಂಬಿ ಜೀವನ, ಗಣಿತ ವಿಷಯದ ಪ್ರಾಮುಖ್ಯ ತಿಳಿಸಬೇಕಿದೆ ಎಂದು ಮುಖ್ಯಶಿಕ್ಷಕ ನಾಗರಾಜಪ್ಪ ಹೇಳಿದರು.
ತಾಲೂಕಿನ ಕೆಂಚಿಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರವಾರ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಮೇಳ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ವೃದ್ಧಿಸುವುದರ ಜತೆಗೆ ಅಳತೆ ಮತ್ತು ಪ್ರಮಾಣಗಳ ಅರಿವು, ಬಂಡವಾಳ ಹೂಡಿಕೆ, ಲಾಭ ನಷ್ಟ, ಸಂವಹನ ಕೌಶಲ, ವಸ್ತುಗಳ ಬೆಲೆ ನಿರ್ಧಾರ ಬಗ್ಗೆ ತಿಳಿಸಲು ಮಕ್ಕಳ ಸಂತೆ ಆಯೋಜಿಸಲಾಗಿದೆ.
ಪಾಲಕರಲ್ಲಿ ಪ್ಲಾಸ್ಟಿಕ್ ಚೀಲಮುಕ್ತ ಜಾಗೃತ, ಗ್ರಾಹಕರ ಮತ್ತು ವ್ಯಾಪಾರಿಗಳ ನಡುವಿನ ಸಂವಹನ, ಖರೀದಿಸುವ ಜ್ಞಾನದ ಬಗ್ಗೆ ಅರಿವು ಮೂಡಿಸಲು ಸಂತೆ ಮೇಳ ನೆರವಾಗಲಿದೆ ಎಂದರು.
ರಾಜ್ಯ ಮಟ್ಟದ ಎತ್ತರ ಜಿಗಿತ ಕ್ರೀಡಾಪಟು ದಕ್ಷಾ ಜಿ.ಕೆ. ಗೆಜ್ಜುರಿ, ಮುಖ್ಯಶಿಕ್ಷಕ ಬಿ. ಸೋಮಶೇಖರಪ್ಪ, ಎಂ.ಎಂ. ಪ್ರಭು ಮತ್ತು ಸಿದ್ದೇಶ್ ಬಲಮುರಿ ಅವರನ್ನು ಸನ್ಮಾಸಲಾಯಿತು. ಚಿಂತನೆ ವಿಜ್ಞಾನ ಪರೀಕ್ಷೆ ಮತ್ತು ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ಮಾಡಲಾಯಿತು. ಅಧ್ಯಕ್ಷ ಕಾಂತರಾಜ್, ಉಪಾಧ್ಯಕ್ಷೆ ಸವಿತಾ, ಮುಖಂಡರಾದ ಮಹೇಶ್ಗೌಡ್ರು, ಚನ್ನೇಶ್ ಇತರರಿದ್ದರು.