ಜಿಲ್ಲೆ

ಕೌಶಲ್ಯಯುತ ಮಾನವ ಸಂಪನ್ಮೂಲದಿಂದ ಅಭಿವೃದ್ಧಿ ಸಾಧ್ಯ

ಬೆಳಗಾವಿ : ಭಾರತ ದೇಶವು ಸ್ವಾತಂತ್ರ್ಯ ನಂತರ ಶೈಕ್ಷಣಿಕ, ತಾಂತ್ರಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ.  ಭಾರತದಲ್ಲಿನ ಯುವಶಕ್ತಿ ಜಗತ್ತಿನಲ್ಲೇ ಪ್ರಸಿದ್ಧಿಯಾಗಿದ್ದು, ಯುವ ಜನಾಂಗ ಕೌಶಲ್ಯಗಳನ್ನು ಬೆಳಸಿಕೊಂಡು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಸಂಸದೆ, ಸುರೇಶ ಅಂಗಡಿ ಶಿಕ್ಷಣ ಸಂಸ್ಥೆಯ ಕಾರ್ಯಧ್ಯಕ್ಷೆ ಮಂಗಲ ಅಂಗಡಿ ಹೇಳಿದರು.

ಸ್ವಾತಂತ್ರ್ಯೋತ್ಸವ ಅಂಗವಾಗಿ ಇಲ್ಲಿನ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತವು ಪುರಾತನ ಕಲೆಗಳಿಂದ ಜಗತ್ತಿನಲ್ಲೇ ಶ್ರೇಷ್ಟವಾಗಿದೆ. ಯುವಕರು ದೇಶವನ್ನು ಉನ್ನತ ಮಟ್ಟಕ್ಕೆ ಒಯ್ಯುವಲ್ಲಿ ಶ್ರಮಿಸಬೇಕು.  ವಿದ್ಯಾರ್ಥಿಗಳು ಕೌಶಲ್ಯ ಕಲೆಗಳನ್ನು ಕಲಿತು ದೇಶ ಸೇವೆ ಮಾಡಬೇಕು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಅಂಗಡಿ ತಾಂತ್ರಿಕ ಕಾಲೇಜು, ಅಂಗಡಿ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಹಾಗೂ ಇಂಟರ್‌ನ್ಯಾಷನಲ್ ಸ್ಕೂಲಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಗಳು ಜರುಗಿದವು. ಇದಕ್ಕೂ ಮುನ್ನ ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ ಸಾಯಿನ್ಸ ಆ್ಯಂಡ್ ಟೆಕ್ನಾಲಜಿ ಆಯೋಜಿಸಿದ್ದ 46ನೇ ವಿದ್ಯಾರ್ಥಿಗಳ ಪ್ರೋಜೆಕ್ಟ್ ಪ್ರದರ್ಶನದಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಪ್ರೊಜೆಕ್ಟ್ ಪ್ರಶಸ್ತಿ ಗಳಿಸಿದ  ವಿದ್ಯಾರ್ಥಿ ಶ್ರೀಧರ ಉಳ್ಳಾಗಡ್ಡಿ ಹಾಗೂ ವಿದೇಶದಲ್ಲಿ ಪ್ರಬಂಧ ಮಂಡಿಸಿದ್ದಕ್ಕಾಗಿ ಕಂಪ್ಯೂಟರ ಸಾಯಿನ್ಸ ಇಂಜನೀಯರಿಂಗ ವಿಭಾಗದ ಪ್ರೊ.ಗಜೇಂದ್ರ ದೇಶಪಾಂಡೆ ಅವರನ್ನು ಸತ್ಕರಿಸಲಾಯಿತು.


ಸಂಸ್ಥೆಯ ನಿರ್ದೇಶಕಿ ಡಾ. ಸ್ಪೂರ್ತಿ ಪಾಟೀಲ, ಕಾಲೇಜಿನ ಆಡಳಿತಾಧಿಕಾರಿ ರಾಜು ಜೋಶಿ, ಪ್ರಾಚಾರ್ಯರಾದ ಡಾ.ಆನಂದ ದೇಶಪಾಂಡೆ,ಪ್ರೊ.ಸಂಗೀತಾ ದೇಸಾಯಿ, ಡಾ.ಸುರೇಶ ಬಾಬು, ಪ್ರೊ.ಎಂ.ವಿ.ಕಂಠಿ,  ಡಾ.ಸೂರ್ಯಕುಮಾರ ಕನೈ, ಪ್ರೊ.ಗುರುರಾಜ ಟಿ., ಪ್ರೊ.ಎಚ್.ಎಸ್. ಪಾಟೀಲ,  ವಿಶಾಂತ ದಮೋಣೆ,  ಮಹಾದೇವ ಶಿರಗಾಂವಕರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.  ಪ್ರೊ.ಗ್ರೀಷ್ಮಾ ನಾಡಕರ್ಣಿ ನಿರೂಪಿಸಿದರು. ಪ್ರೊ.ಶೃತಿ ಉಮರೆ ವಂದಿಸಿದರು.