ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಎಸ್‌ಎಲ್ ಶೇಟ್ ಡೈಮಂಡ್ ಹೌಸ್‌ನಲ್ಲಿ ಧ್ವಜಾರೋಹಣ, ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಕಾರ್ಯಕ್ರಮ ನಡೆಯಿತು. ಹಿರಿಯರಾದ ಎಚ್‌ಯು ಅನಂತಯ್ಯ ಅವರು ನೆರವೇರಿಸಿದರು. 
ಜಿಲ್ಲೆ

ಎಸ್‌ಎಲ್ ಶೇಟ್ ಡೈಮಂಡ್ ಹೌಸ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

ಮಂಗಳೂರು: ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಎಸ್‌ಎಲ್ ಶೇಟ್ ಡೈಮಂಡ್ ಹೌಸ್‌ನಲ್ಲಿ ಧ್ವಜಾರೋಹಣ, ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಕಾರ್ಯಕ್ರಮ ನಡೆಯಿತು.

ಹಿರಿಯರಾದ ಎಚ್‌ಯು ಅನಂತಯ್ಯ ಅವರು ನೆರವೇರಿಸಿದರು. ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿ ಶೌರ್ಯಮೆರೆದ ನಿವೃತ್ತ ಯೋಧ ಶರತ್ ಕುಮಾರ್ ಭಟ್ ಉಪ್ಪಿನಂಗಡಿ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಎಸ್‌ಎಲ್ ಶೇಟ್ ಡೈಮಂಡ್ ಹೌಸ್ ಮಾಲಕ ಎಂ ರವೀಂದ್ರ ಶೇಟ್, ಸಂಸ್ಥೆಯ ಮುಖ್ಯಸ್ಥರಾದ ಎಂ ಶರತ್ ಶೇಟ್, ಎಂ ಪ್ರಸಾದ್ ಶೇಟ್, ಎಂ ದೀಪ್ತಿ ಶೇಟ್, ಎಂ ವಿದ್ಯಾ ಶೇಟ್, ಎಂ ಶಿವಾನಿ ಶೇಟ್ ಸೇರಿದಂತೆ ಹಲವರು ಇದ್ದರು.