ಸ್ವಾತಂತ್ರೋತ್ಸವ ಪ್ರಯುಕ್ತ ಸಿಂಧನೂರಿನ ತಾಲೂಕ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳು ಪರೇಡ್ ಪೂರ್ವಭ್ಯಾಸ ಮಾಡಿದರು. 
ಜಿಲ್ಲೆ

ಸ್ವಾತಂತ್ರೋತ್ಸವದಲ್ಲಿ 20 ತಂಡಗಳಿಂದ ಪಥಸಂಚಲನ

ಸಿಂಧನೂರು: ಸ್ವಾತಂತ್ರೋತ್ಸವ ಅಂಗವಾಗಿ ತಾಲೂಕ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಪೊಲೀಸ್ ಇಲಾಖೆ, ವಿದ್ಯಾರ್ಥಿಗಳು ಪೂರ್ವಭಾವಿಯಾಗಿ ಪರೇಡ್ ನಡೆಸಿದರು.

ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ

ತಹಸೀಲ್ದಾರ್ ಅರುಣ್ ದೇಸಾಯಿ ಮಾತನಾಡಿ, ಸ್ವಾತಂತ್ರೋತ್ಸವ ನಿಮಿತ್ತ ಪೊಲೀಸ್, ಸ್ಕೌಡ್ಸ್-ಗೈಡ್ಸ್ ಸೇರಿದಂತೆ 20 ಕ್ಕೂ ಹೆಚ್ಚು ತಂಡಗಳಿಂದ ಪಥಸಂಚಲನ ನಡೆಯಲಿದೆ. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು. ತೆರೆದ ವಾಹನದಲ್ಲಿ ಶಾಸಕರು ಗೌರವ ಧ್ವಜಾವಂದನಾ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.

ಸ್ತಬ್ಧಚಿತ್ರ ಮೆರವಣಿಗೆ

ಆ. 14 ರಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್, ಸಚಿವ ಪ್ರಿಯಾಂಕ ಖರ್ಗೆ ಅವರು ಸಿಂಧನೂರಿಗೆ ಆಗಮಿಸಲಿದ್ದಾರೆ. ನನ್ನ ದೇಶ ನನ್ನ ಮಣ್ಣು ಘೋಷವಾಕ್ಯದೊಂದಿಗೆ ಸಿಂಧನೂರಿನ ನಡಿಗೆ ಸ್ವಾತಂತ್ರೋತ್ಸವದ ಕಡೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸ್ತಬ್ಧಚಿತ್ರ ಮೆರವಣಿಗೆ ಸೇರಿದಂತೆ ಅನೇಕ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 12 ರಿಂದ 15 ಸಾವಿರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಅದ್ದೂರಿಯಾಗಿ ಆಚರಿಸಲು ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.

ಪಿಎಸ್‌ಐ ಭರತ್‌ರಡ್ಡಿ, ಪಿಐ ದುರುಗಪ್ಪ, ಕ್ಷೇತ್ರ ದೈಹಿಕ ಶಿಕ್ಷಣಾಧಿಕಾರಿ ರಂಗರಡ್ಡಿ, ವೆಂಕಟನಾರಾಯಣ, ದೈಹಿಕ ಶಿಕ್ಷಕ ಪಂಪನಗೌಡ, ಎಚ್.ಎಫ್.ಮಸ್ಕಿ, ಎಂ.ಎಂ.ಸುಣಗದ ಇದ್ದರು.