ಜಿಲ್ಲೆ

ಮೈಸೂರಿನ ವಿವಿಧೆಡೆ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

ಸದೇಶ್ ಕಾರ್ಮಾಡ್

ಮೈಸೂರು: ನಗರದ ವಿವಿಧ ಸಂಘ ಸಂಸ್ಥೆಗಳು, ಶಾಲಾ, ಕಾಲೇಜುಗಳಲ್ಲಿ 77ನೇ ಸ್ವಾತಂತ್ರ್ಯ ದಿನವನ್ನು ಸಡಗರ ಸಂಭ್ರಮದೊಂದಿಗೆ ಅರ್ಥಪೂಣ ವಾರ್ಗಿ ಆಚರಿಸಲಾಯಿತು.

ಹುಣಸೂರು ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಯೋಗಭವನ ರಾಜಯೋಗ ರಿಟ್ರೀಟ್ ಸೆಂಟರ್‌ನಲ್ಲಿ ಬ್ರಹ್ಮಾಕುಮಾರ, ಬ್ರಹ್ಮಾಕುಮಾರಿಯರುಸ್ವಾತಂತ್ರ್ಯ ದಿನ ಆಚರಿಸಿದರು.

ಸಂಸ್ಥೆಯ ಮೈಸೂರು ಉಪವಿಭಾಗದ ಈಶ್ವರೀಯ ವಿಶ್ವವಿದ್ಯಾಲಯಗಳ ಮುಖ್ಯ ಸಂಚಾಲಾಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀಜಿ ಮಾತನಾಡಿ, ಮಹಾತ್ಮ ಗಾಂಧೀಜಿ ಹಾಗೂ ಹಲವು ಸ್ವಾತಂತ್ರೃ ಹೋರಾಟಗಾರರ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರೃ ದೊರೆತ್ತಿದೆ. ಸ್ವಾತಂತ್ರೃ ಬಂದು ಏಳು ದಶಕಗಳು ಕಳೆದರೂ ಸತ್ಯ ಸ್ವಾತಂತ್ರೃದಿಂದ ವಂಚಿತರಾಗುತ್ತಿದ್ದೇವೆ. ಸಕರಾತ್ಮಕವಾಗಿ ಬದಲಾಗದ ಹೊರತು ಸುಖ, ಶಾಂತಿ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರರಾದ ಸ್ವಾಮಿನಾಥ್, ರಂಗನಾಥ್, ರಾಮಚಂದ್ರ, ಪ್ರಾಣೇಶ್, ಕೃಷ್ಣಮೂರ್ತಿ, ರಾಜಯೋಗಿನಿ ಬ್ರಹ್ಮಾಕುಮಾರಿ ಶಾರದಾಜೀ, ಬ್ರಹ್ಮಾಕುಮಾರಿ ಮಂಜುಳಾ ಹಾಗೂ ಇತರರು ಇದ್ದರು.

ವಿಷ್ಣುವರ್ಧನ್ ಅಭಿಮಾನಿಗಳು: ಉದ್ಬೂರ್‌ಗೇಟ್ ಬಳಿ ಇರುವ ನಟ ವಿಷ್ಣುವರ್ಧನ್ ಸ್ಮಾರಕದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳ ಸಂಘಟನೆ ಒಕ್ಕೂಟದಿಂದ ಸ್ವಾತಂತ್ರೃ ದಿನ ಆಚರಿಸಲಾಯಿತು. ಈ ಸಂದರ್ಭ ಒಕ್ಕೂಟದ ಅಧ್ಯಕ್ಷ ಎಂ.ಡಿ. ಪಾರ್ಥಸಾರಥಿ, ಕೆಪಿಸಿಸಿ ಸದಸ್ಯರಾದ ನಜರ್‌ಬಾದ್ ನಟರಾಜ್, ಎಂ.ಪಿ. ರಾಜೇಶ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ವಿಷ್ಣು ಅಭಿಮಾನಿಗಳಾದ ಲೋಕೇಶ್, ಎಸ್.ಎನ್. ರಾಜೇಶ್, ಬೈರತಿ ಲಿಂಗರಾಜು, ನವೀನ್ ಕೆಂಪಿ, ಮಂಜುನಾಥ್, ಸುಚಿಂದ್ರ ಹಾಗೂ ಇತರರು ಇದ್ದರು.

ಲಯನ್ಸ್ ಕ್ಲಬ್: ನಗರದ ಬೃಂದಾವನ ಬಡಾವಣೆಯಲ್ಲಿರುವ ಚಾಮುಂಡಿ ಬಿಲ್ಡ್ರನ್ಸ್ ಹೋಂ ಶಿಕ್ಷಣ ಸಂಸ್ಥೆಯಲ್ಲಿ ಲಯನ್ಸ್ ಕ್ಲಬ್ ಗಂಗೋತ್ರಿ ವತಿಯಿಂದ ಸ್ವಾತಂತ್ರೃ ದಿನ ಆಚರಿಸಲಾಯಿತು. ಧ್ವಜಾರೋಹಣದ ನಂತರ ಮಕ್ಕಳಿಗೆ ಸಿಹಿ ವಿತರಿಸಿ ಮಕ್ಕಳ ಶಿಕ್ಷಣಕ್ಕಾಗಿ ಸಂಸ್ಥೆಯ ಗೌರವ ಕಾರ್ಯದರ್ಶಿ ರಘೋತ್ತಮ ರಾವ್ ದೇಣಿಗೆ ನೀಡಿದರು. ಸಂಸ್ಥೆಯ ಅಧ್ಯಕ್ಷೆ ಮಾಲಾ ಚಂದ್ರಶೇಖರ್, ಕ್ಲಬ್‌ನ ಸದಸ್ಯರಾದ ಗಾಯತ್ರಿ ಜಗದೀಶ್, ಉಮಾ ಬಾಬು, ಕಲಾವತಿ, ಪ್ರೀತಿ ಹಾಗೂ ಇತರರು ಇದ್ದರು.

ಜೀವಧಾರ: ನಗರದ ನ್ಯೂ ಸಯ್ಯಜಿರಾವ್ ರಸ್ತೆಯ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ಸ್ವಾತಂತ್ರೃ ದಿನ ಆಚರಿಸಿ ಸಿಹಿ ವಿತರಿಸಲಾಯಿತು. ಈ ಸಂದರ್ಭ ರೂಪದರ್ಶಿ ತನಿಷ್ಕಮೂರ್ತಿ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ಮುತ್ತಣ್ಣ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಹಾಗೂ ಇತರರು ಇದ್ದರು.

ನಗರದ ಬೋಗಾದಿ ಮುಖ್ಯ ರಸ್ತೆಯ ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಸ್ವಾತಂತ್ರೃ ದಿನ ಆಚರಿಸಲಾಯಿತು. ಮಹಾರಾಜ ಕಾಲೇಜು ಉಪನ್ಯಾಸಕ ಡಾ.ಕೆ. ತಿಮ್ಮಯ್ಯ ಧ್ವಜಾರೋಹಣ ನೆರವೇರಿಸಿದರು. ನಗರಪಾಲಿಕೆ ಸದಸ್ಯೆ ವೇದಾವತಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮೇಯರ್ ಟಿ.ಬಿ.ಚಿಕ್ಕಣ್ಣ, ಶಾಲಾ ಆಡಳಿತಾಧಿಕಾರಿ ಕಾಂತಿನಾಯಕ್, ಮುಖ್ಯೋಪಾಧ್ಯಾಯ ಫಾರೂಕ್ ಮೊಹಮ್ಮದ್ ಹಾಗೂ ಇತರರು ಇದ್ದರು.

ನಗರದ ನೋಟು ಮುದ್ರಣ ನಗರದ ಆರ್‌ಬಿಐ ಕೇಂದ್ರೀಯ ವಿದ್ಯಾಲಯದಲ್ಲಿ ಸ್ವಾತಂತ್ರೃ ದಿನ ಆಚರಿಸಲಾಯಿತು. ಪ್ರಾಂಶುಪಾಲರಾದ ಎಂ.ಭಾಗ್ಯಲಕ್ಷ್ಮಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರೃ ದಿನಾಚರಣೆ ಭಾರತೀಯರಾದ ನಮ್ಮೆಲ್ಲರ ಅಸ್ತಿತ್ವದ ಪ್ರತೀಕವಾಗಿದೆ. ಬ್ರಿಟೀಷ್ ವಸಾಹತುಶಾಹಿ ಸಾಮ್ರಾಜ್ಯದಿಂದ ಮುಕ್ತರಾದ ನಾವು ಸ್ವಾತಂತ್ರೃದ ಅಮೃತ ಮಹೋತ್ಸವ ಆಚರಣೆಯ ಹೊಸ್ತಿಲಿನಲ್ಲಿದ್ದು, ಪ್ರಗತಿಯತ್ತ ದಾಪುಗಾಲು ಇಡುತ್ತಿದ್ದೇವೆ. ಜಿ-20 ದೇಶಗಳ ನೇತೃತ್ವ ವಹಿಸಿರುವ ಭಾರತ, ಇಂದು ಜಗತ್ತಿನ ವ್ಯಾಪಾರ, ಆರ್ಥಿಕತೆ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು. ಚಂದ್ರಯಾನದಲ್ಲಿ ಯಶಸ್ವಿಯಾದ ಭಾರತ ಇಂದು ತಾಂತ್ರಿಕ ಹಾಗೂ ವೈಜ್ಞಾನಿಕ ಕ್ಷೇತ್ರಗಳಲ್ಲಿ ವಿಕಸಿತವಾದ ಬೆರಳೆಣಿಕೆಯ ದೇಶಗಳ ಸಾಲಿನಲ್ಲಿ ನಿಂತಿದೆ. ಇವೆಲ್ಲ ನಮಗೆ ಹೆಮ್ಮೆ ತರುವ ವಿಷಯಗಳಾಗಿವೆ ಎಂದು ಹೇಳಿದರು.

ನಗರದ ಆದಿಚುಂಚನಗಿರಿ ಮಹಿಳಾ ಸಮಾಜ ವತಿಯಿಂದ ಸ್ವಾತಂತ್ರೃ ದಿನವನ್ನು ಕುವೆಂಪುನಗರದ ಆದಿಚುಂಚನಗಿರಿ ಶಾಲೆಯಲ್ಲಿ ಅಧ್ಯಕ್ಷೆ ಸವಿತ ಗೌಡ ನೇತೃತ್ವದಲ್ಲಿ ಆಚರಿಸಲಾಯಿತು. ಹಿನಕಲ್‌ನ ವಾತ್ಸಲ್ಯ ಸೇವಾಶ್ರಮದಲ್ಲಿ ಸ್ವಾತಂತ್ರೃ ದಿನಾಚರಣೆ ಏರ್ಪಡಿಸಲಾಗಿತ್ತು. ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಎ.ಸಿ. ರವಿಕುಮಾರ್, ಶಶಿಕಲಾ, ವೆಂಕಟೇಶ್ ಹಾಗೂ ಇತರರು ಇದ್ದರು.

ವಿಜಯನಗರ 2ನೇ ಹಂತದ ಬಡಾವಣೆಯ ಹಿರಿಯ ನಾಗರೀಕರ ಹಿತರಕ್ಷಣಾ ಸಮಿತಿ ವತಿಯಿಂದ ಸ್ವಾತಂತ್ರೃ ದಿನ ಆಚರಿಸಲಾ ಯಿತು. ಸಮಿತಿ ಅಧ್ಯಕ್ಷ ಶ್ರೀಕಾಂತ ಬಡಿಗೇರ ಹಾಗೂ ಇತರರು ಇದ್ದರು.