ಮಡಿಕೇರಿ:
ಕೊಡವ ನ್ಯಾ?ನಲ್ ಕೌನ್ಸಿಲ್ ಸಂಘಟನೆ ವತಿಯಿಂದ ೭೮ನೇ ಸ್ವಾತಂತ್ರ್ಯೋತ್ಸವವನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು.
ಜಿಲ್ಲಾ ಕ್ರೀಡಾಂಗಣ ಸಮೀಪದ ನಾಡ್ ಮಂದ್ ನಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ಅತ್ಯಂತ ಸಣ್ಣ ಕೊಡವ ಬುಡಕಟ್ಟು ಜನಾಂಗ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಚಾರ. ತ್ಯಾಗ ಮನೋಭಾವದ ದೇಶಭಕ್ತ ಕೊಡವ ವೀರರು ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ.
ಕೊಡವ ಬುಡಕಟ್ಟು ಜಗತ್ತಿಗೆ ರಾಜಕೀಯ ಸ್ವಾಯತ್ತತೆ, ಆರ್ಥಿಕ ಭದ್ರತೆ ಮತ್ತು ಭೌತಿಕ ರಕ್ಷಣೆಯನ್ನು ಮರಳಿ ಪಡೆಯುವತ್ತ ನಾವು ಸಾಗುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಭೌಗೋಳಿಕ-ರಾಜಕೀಯ ಗುರಿಯನ್ನು ಸಾಧಿಸಲು ನಾವು ಪ್ರತಿಜ್ಞೆ ಮಾಡುತ್ತೇವೆ. ನಮ್ಮ ಭಾರತ ಮಾತೆ ಜಗತ್ತಿನಲ್ಲೇ ಬಲಿ?್ಠ ಮತ್ತು ಸಮೃದ್ಧ ದೇಶವಾಗಿದ್ದು, ಈ ಪುಣ್ಯಭೂಮಿಯಲ್ಲಿ ನಮ್ಮ ಭೂಮಿಯ ಹಕ್ಕುಗಳ ಸ್ವಾತಂತ್ರ್ಯ, ಸಂಸ್ಕೃತಿ, ಜಾನಪದ ಪರಂಪರೆಯ ಹಕ್ಕುಗಳ ಸ್ವಾತಂತ್ರ್ಯ ನಮ್ಮ ಐತಿಹಾಸಿಕ ನಿರಂತರತೆ ಮತ್ತು ರಾಜಕೀಯ ಹಕ್ಕುಗಳ ಸ್ವಾತಂತ್ರ್ಯಕ್ಕಾಗಿ ಶಾಸನಬದ್ಧ ಅನುಮೋದನೆಯನ್ನು ಕೋರುತ್ತೇವೆ. ಆ ಮೂಲಕ ಸಾಧ್ಯವಾದ?್ಟು ಶೀಘ್ರ ಕೊಡವಲ್ಯಾಂಡ್ ಮರು ಸ್ಥಾಪನೆಯಾಗುತ್ತದೆ ಎನ್ನುವ ವಿಶ್ವಾಸ ಹೊಂದಿದ್ದೇವೆ ಎಂದರು.
ನಾವು ಕೊಡವ ಜನಾಂಗದ ಬುಡಕಟ್ಟುಗಳು ಈ ನೆಲದ ಮೂಲನಿವಾಸಿಗಳು. ನಮ್ಮ ನಿ?್ಠೆಯು ನಮ್ಮ ತಾಯಿ ರಾಷ್ಟ್ರ ಭಾರತ ಮತ್ತು ನಮ್ಮ ತಾಯ್ನಡು ಕೊಡವಲ್ಯಾಂಡ್‌ನೊಂದಿಗೆ ಯಾವಾಗಲೂ ಇರುತ್ತದೆ. ಕೊಡವ ಜನಾಂಗೀಯ ಬುಡಕಟ್ಟು ಭರತವ?ರ್ದ ಪ್ರಾಚೀನ ತತ್ವಶಾಸ್ತ್ರದ ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಂಡಿದೆ ಮತ್ತು ನಮ್ಮ ಪವಿತ್ರ ಸಂವಿಧಾನಕ್ಕೆ ಬದ್ಧವಾಗಿದೆ ಎಂದು ಹೇಳಿದರು.
ಮಣವಟ್ಟಿರ ಚಿಣ್ಣಪ್ಪ, ಪುಟ್ಟಿಚಂಡ ದೇವಯ್ಯ, ಪುದಿಯೊಕ್ಕಡ ಕಾಶಿ ಮತ್ತಿತರರು ಇದ್ದರು.