ಜಿಲ್ಲೆ

ಎಸ್ ಎಸ್ ಕೆ ಬ್ಯಾಂಕ್ ನಲ್ಲಿ ಸ್ವಾತಂತ್ರ್ಯೋತ್ಸವ

Dharwada - Basavaraj Idli

ಹುಬ್ಬಳ್ಳಿ: ನಗರದ ಎಸ್ ಎಸ್ ಕೆ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಗುರುವಾರ 78ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಬ್ಯಾಂಕ್ ನಿರ್ದೇಶಕಿ ಸೀಮಾ ಲದವಾ ಧ್ವಜಾರೋಹಣ ನೆರವೇರಿಸಿದರು.

ನೇತೃತ್ವ ವಹಿಸಿದ್ದ ಬ್ಯಾಂಕ್ ಚೇರ್ಮನ್ ವಿಠ್ಠಲ ಲದವಾ, ದೇಶದ ಅಖಂಡತೆ ಮತ್ತು ಭದ್ರತೆಯನ್ನು ಸುಭದ್ರಗೊಳಿಸಲು ಭಾರತೀಯರೆಲ್ಲ ಕಾರ್ಯಪ್ರವೃತ್ತರಾಗಬೇಕೆಂದು ಹೇಳಿದರು.

ವೈಸ್ ಚೇರ್ಮನ್ ನಾರಾಯಣ ಜರತಾರರ, ನಿರ್ದೇಶಕ ಪ್ರಕಾಶ ಬುರಬುರೆ, ಸದಸ್ಯರಾದ ಸುನಿಲ ವಾಳ್ವೇಕರ, ಅರುಣ ಇರಕಲ್ಲ, ದೀಪಕ ಮಗಜಿಕೊಂಡಿ, ನಾರಾಯಣ ಖೋಡೆ, ಸರಳಾ ಭಾಂಡಗೆ, ಅಂಬಾಸಾ ಪೂಜಾರಿ, ಕಾಶೀನಾಥಸಾ ವಾಳ್ವೇಕರ, ಲಕ್ಷ್ಮಣ ದಲಬಂಜನ ಇತರರು ಉಪಸ್ಥಿತರಿದ್ದರು.