ಹುಬ್ಬಳ್ಳಿ: ನಗರದ ಎಸ್ ಜೆಆರ್ ವಿಪಿ ಮಂಡಳದ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿದ ನಿವೃತ್ತ ಪೊಲೀಸ್ ಅಧಿಕಾರಿ ಎ.ಆರ್. ಬಡಿಗೇರ ಮಾತನಾಡಿ, ಅನೇಕ ಮಹನೀಯರ ತ್ಯಾಗ, ಬಲಿದಾನದ ಪ್ರತಿಫಲವಾಗಿ ಸ್ವಾತಂತ್ರ್ಯ ಸಿಕ್ಕಿದೆ. ಇದನ್ನು ಕಾಪಾಡಿಕೊಂಡು ಹೋಗಬೇಕು. ಮೊದಲು ನಾವೆಲ್ಲ ಭಾರತೀಯರು ಎಂಬ ಹೆಮ್ಮೆ ಇರಬೇಕು. ದೇಶಕ್ಕಾಗಿ ದುಡಿಯಬೇಕು. ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತಲೂ ಮಿಗಿಲಾದುದು ಎಂದರು.
ಶಾಲೆಯ ಅಧ್ಯಕ್ಷ ಭವರಲಾಲ್ ಸಿ. ಜೈನ್ ಮಾತನಾಡಿ, ಭಾರತದ ಪ್ರಜೆಗಳಾದ ನಾವು ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಸನ್ನದ್ಧರಾಗಬೇಕು. ನಾವು ಮಾಡುವ ಕೆಲಸಗಳು ಪರಿಶ್ರಮ, ಪ್ರಯತ್ನದಿಂದ ಕೂಡಿರಬೇಕು ಎಂದು ಹೇಳಿದರು.
ಜೈನ್ ಮರುಧರ ಸಂಘದ ಟ್ರಸ್ಟಿ ಜಯಂತಿಲಾಲಜಿ ಜೈನ್, ಕಾಂತಿಲಾಲಜಿ ಜೈನ್, ಶಾಲೆಯ ಕಾರ್ಯದರ್ಶಿ ಭರತ್ ಭಂಡಾರಿ, ಉಪಾಧ್ಯಕ್ಷ ಮಹೇಂದ್ರಕುಮಾರ ಪಾಲ್ಗೋತಾ, ಕೋಶಾಧಿಕಾರಿ ಪುರಣಕುಮಾರ ನಹಾಟಾ, ಜಂಟಿ ಕಾರ್ಯದರ್ಶಿ ಭರತ ಜೈನ್, ನಿರ್ದೇಶಕರಾದ ಮಹಾವೀರ ಜೈನ್, ಪೃಥ್ವಿರಾಜ ಸುರಾಣಾ, ಅಶ್ವಿನಕುಮಾರ ಜೈನ್, ಪ್ರಾಚಾರ್ಯ ಡಾ. ಕ್ಯಾಥರೀನ್ ದಿನೇಶ, ಇತರರು ಉಪಸ್ಥಿತರಿದ್ದರು.
ಮುಖೇಶ ಕೊಠಾರಿ ಅವರು ತಮ್ಮ ತಾಯಿ ವಿಮಲಾಬಾಯಿ ಮಿಲಾಪಚಂದಜಿ ಕೊಠಾರಿ ಅವರ ಸ್ಮರಣಾರ್ಥ ಸಿಹಿಹಂಚಿದರು.