ವಿಜಯಪುರ ನಗರದ ಶಾಂತಿನಿಕೇತನ ಪ್ರಾಥಮಿಕ- ಪ್ರೌಢಶಾಲೆಯಲ್ಲಿ ಸೈನ್ಯಕ್ಕೆ ಆಯ್ಕೆಯಾದ ರೂಪಾ ಸೂರ್ಯವಂಶಿ ಅವರನ್ನು ಸನ್ಮಾನಿಸಲಾಯಿತು. ಶರತ ಬಿರಾದಾರ, ಶೀಲಾ ಬಿರಾದಾರ ಇತರರಿದ್ದರು. 
ಜಿಲ್ಲೆ

ಶಾಂತಿನಿಕೇತನ ಶಾಲೆಯಲ್ಲಿ ಸ್ವಾತಂತ್ರ್ಯ ದಿನ

ಗಿರೀಶ ಸಗರ

ವಿಜಯಪುರ: ನಗರದ ಆಶ್ರಮ ರಸ್ತೆಯಲ್ಲಿನ ಆದರ್ಶನಗರದ ಶಾಂತಿನಿಕೇತನ ಪ್ರಾಥಮಿಕ- ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸೈನ್ಯಕ್ಕೆ ಆಯ್ಕೆಯಾದ ರೂಪಾ ಶಿವಾಜಿ ಸೂರ್ಯವಂಶಿ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ನಿರ್ದೇಶಕ ಶರತ ಬಿರಾದಾರ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷೆ ಶೀಲಾ ಬಿರಾದಾರ ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದರು.

ವಿದ್ಯಾರ್ಥಿಗಳು ದೇಶಭಕ್ತಿ ಹಾಡಿಗೆ ನೃತ್ಯ ಪ್ರದರ್ಶಿಸಿದರು. ಪ್ರಾಚಾರ್ಯ ಶ್ರೀಧರ ಕುರಬೆಟ, ಶಿಕ್ಷಕಿ ವಿದ್ಯಾ ರಾಠೋಡ, ಮೇಘಾ ಸೂರ್ಯವಂಶಿ, ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ, ಎ.ಎಚ್.ಸಗರ, ಅನೀಲ ಬಾಗೇವಾಡಿ, ಬಸವರಾಜ ರೆಬಿನಾಳ, ಅಶ್ವಿನ ವಗದರಗಿ, ಹೀನಾ ಕೌಸರ ಇತರರಿದ್ದರು.