ಕಾಪುವಿನಲ್ಲಿ ನಡೆದ ನೈತಿಕತೆಯೇ ಸ್ವಾತಂತ್ರೃದ ಭರವಸೆ ಅಭಿಯಾನ ಕಾರ್ಯಕ್ರಮದಲ್ಲಿ ರೇಷ್ಮಾ ಬೈಲೂರು ಮಾತನಾಡಿದರು. ಸಾವಿತ್ರಿ ಗಣೇಶ್, ಕುಲ್ಸುಮ್ ಅಬೂಬಕರ್, ಮೋನಿಕಾ ಕರ್ನೆಲಿಯೊ, ಯಶೋದಾ ಕೇಶವ್ ಮತ್ತಿತರರು ಇದ್ದರು 
ಜಿಲ್ಲೆ

ಜೀವನದಲ್ಲಿ ಉನ್ನತಮಟ್ಟದ ನೈತಿಕತೆ ಅಳವಡಿಕೆ

ಇಂದಿರಾ ಎನ್ ಕೆ

ಪಡುಬಿದ್ರಿ: ಬದುಕಿನಲ್ಲಿ ಅಳವಡಿಸಿರುವ ಗುಣಗಳಿಗೆ ಬೆಲೆ ಬರಬೇಕಾದರೆ, ಮನುಷ್ಯನು ತನ್ನಲ್ಲಿ ಉನ್ನತಮಟ್ಟದ ನೈತಿಕತೆ ಹೊಂದಿರಬೇಕು. ಕುಟುಂಬದ ಹಿರಿಯರು ಉನ್ನತ ಮಟ್ಟದಲ್ಲಿ ಚಾರಿತ್ರೃವಂತರಾದರೆ, ಅದರ ಪ್ರಭಾವ ಅವರ ಕುಟುಂಬ ಮತ್ತು ವಾಸಿಸುವ ಸಮಾಜದಲ್ಲಿ ಪರಿಣಾಮ ಬೀರುತ್ತದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಜಿಲ್ಲಾ ಮಹಿಳಾ ವಿಭಾಗ ಸಹ ಸಂಚಾಲಕಿ ರೇಷ್ಮಾ ಬೈಲೂರು ಹೇಳಿದರು.

ಜಮಾ ಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗ, ಭಾರತ ದೇಶಾದ್ಯಂತ ಹಮ್ಮಿಕೊಂಡಿರುವ ನೈತಿಕತೆಯೇ ಸ್ವಾತಂತ್ರೃದ ಭರವಸೆ ಅಭಿಯಾನ ಅಂಗವಾಗಿ ಕಾಪು ವರ್ತುಲದ ಮಹಿಳಾ ವಿಭಾಗ ವತಿಯಿಂದ ಕಾಪುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾವಿತ್ರಿ ಗಣೇಶ್, ಜಮಾ ಅತೆ ಇಸ್ಲಾಮಿ ಹಿಂದ್ ಉಡುಪಿ ಜಿಲ್ಲಾ ಮಹಿಳಾ ಸಂಚಾಲಕಿ ಕುಲ್ಸುಮ್ ಅಬೂಬಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೋನಿಕಾ ಕರ್ನೆಲಿಯೊ ಮತ್ತು ಯಶೋದಾ ಕೇಶವ್ ವಿಷಯ ಮಂಡಿಸಿದರು.

ಪುರಸಭಾ ಸದಸ್ಯೆ ಮೋಹಿನಿ ಶೆಟ್ಟಿ, ಸುಲೋಚನಾ ಬಂಗೇರ, ಶಾಂತಲತಾ ಶೆಟ್ಟಿ, ವಿದ್ಯಾ ಆನಂದ್, ಅಶ್ವಿನಿ ಬಂಗೇರಾ, ಮಾಜಿದಾ, ರಹಮತುನ್ನಿಸ ಉಪಸ್ಥಿತರಿದ್ದರು. ಕಾಪು ಸ್ಥಾನೀಯ ಸಂಚಾಲಕಿ ಶೆಹೇನಾಜ್ ಕಾರ್ಯಕ್ರಮ ನಿರೂಪಿಸಿದರು. ಮಸ್ನಾ ಮೂಳೂರು ವಂದಿಸಿದರು.