ಹನೂರು: ತಾಲೂಕಿನ ನಾಲ್‌ರೋಡ್ ಬಳಿ ಪೆಟ್ಟಿಗೆ ಅಂಗಡಿಯನ್ನು ಅರಣ್ಯ ಅಧಿಕಾರಿಗಳು ತೆರವುಗೊಳಿಸಿರುವುದನ್ನು ಖಂಡಿಸಿ ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ಅವರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಜೂ.11 ರಂದು ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಹೇಳಿದರು.
ಗ್ರಾಮದ ಜ್ಯೋತಿ ಎಂಬುವರು ಮಾತನಾಡಿ, ಕಳೆದ 30-40 ವರ್ಷದಿಂದ ನಾಲ್‌ರೋಡ್ ಬಳಿಯ ಹೂಗ್ಯಂ ಗ್ರಾಮಕ್ಕೆ ತೆರಳುವ ರಸ್ತೆ ಬದಿಯಲ್ಲಿ ಪೆಟ್ಟಿಗೆ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ನಡೆಸುವುದರ ಮೂಲಕ ಜೀವನ ಸಾಗಿಸುತ್ತಿದ್ದೇವೆ. ಆದರೆ, ಯಾವುದೇ ನೋಟಿಸನ್ನು ನೀಡದೆ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಜೂ.1ರ ಮಧ್ಯರಾತ್ರಿ 2ಗಂಟೆ ಸಮಯದಲ್ಲಿ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಇದರಿಂದ ತುಂಬ ತೊಂದರೆಯಾಗಿದೆ. ಆದ್ದರಿಂದ ಗ್ರಾಮಸ್ಥರು ಹಾಗೂ ರೈತಪರ ಸಂಘಟನೆಯ ಜತೆಗೂಡಿ ನಾಲ್‌ರೋಡ್ ಅರಣ್ಯ ಇಲಾಖೆಯ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ತಿಳಿಸಿದರು.
ವೆಂಕಟಾಚಲ, ರವಿಕುಮಾರ್, ಜಾನ್, ಮಣಿ, ಷಣ್ಮುಗ ಇತರರಿದ್ದರು.