ಜಿಲ್ಲೆ

ಚಾಮುಂಡಿಬೆಟ್ಟದಲ್ಲಿ ಹೊರ ರಾಜ್ಯದ ಯುವಕರಿಂದ ಅಸಭ್ಯ ವರ್ತನೆ: ಪ್ರಕರಣ ದಾಖಲು

ಮೈಸೂರು: ನಗರದ ಚಾಮುಂಡಿಬೆಟ್ಟದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಹೊರ ರಾಜ್ಯದವರ ಮೇಲೆ ಮಂಗಳವಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಚಾಮುಂಡಿಬೆಟ್ಟದ ಮೆಟ್ಟಿಲು ಬಳಿ ಇರುವ ವ್ಯೆ ಪಾಯಿಂಟ್‌ನಲ್ಲಿ ಕೆಲವು ಪುಂಡ ಯುವಕರು ಶರ್ಟ್ ಕಳಚಿ ಅಸಭ್ಯವಾಗಿ ವರ್ತಿಸುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಚಾಮುಂಡಿಬೆಟ್ಟ ಉಪ ಪೊಲೀಸ್ ಠಾಣೆ ಅಧಿಕಾರಿಗಳು ಯುವಕರನ್ನು ವಶಕ್ಕೆ ಪೆಡದು ಅವರ ಮೇಲೆ ಲಘು ಪ್ರಕರಣ ದಾಖಲಿಸಿದರು.

ಕ್ರಿಕೆಟ್ ಬೆಟ್ಟಿಂಗ್: ಯರಗನಹಳ್ಳಿಯ ಎಸ್‌ಆರ್‌ಟಿ ಮಾಳದ ಎದುರು ಇರುವ ಗ್ಯಾಸ್‌ಸ್ಟೌವ್ ರಿಪೇರಿ ಶಾಪ್‌ನಲ್ಲಿ ವ್ಯಕ್ತಿಯೊಬ್ಬ ಆನ್‌ಲೈನ್‌ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಸಂದರ್ಭ ಆತನನ್ನು ವಶಕ್ಕೆ ಪಡೆದು ಬೆಟ್ಟಿಂಗ್‌ಗೆ ಬಳಸುತ್ತಿದ್ದ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.