ಜಿಲ್ಲೆ

ಸಾಲಬಾಧೆಯಿಂದ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

Haveri - Kariyappa Aralikatti

ಬ್ಯಾಡಗಿ: ಸಾಲಬಾಧೆಯಿಂದ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹಿರೇಹಳ್ಳಿಯಲ್ಲಿ ಮಂಗಳವಾರ ನಡೆದಿದೆ.
ಮುಕೇಶ ಮಲ್ಲಪ್ಪ ಬೂದಗಟ್ಟಿ (38) ಮೃತ ರೈತ.
ಇವರು ಕೃಷಿಗಾಗಿ ಬ್ಯಾಂಕ್‌ನಲ್ಲಿ 3.75 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಆದರೆ, ಕಳೆದ ವರ್ಷ ಮಳೆ ಬಾರದ ಕಾರಣ ಬೆಳೆ ಒಣಗಿ ಹಾಳಾಗಿ ಹೋಗಿತ್ತು. ಇದರಿಂದ ಸಾಲ ತೀರಿಸಲಾಗದೆ ಮನನೊಂದು ಜಮೀನುವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.