ಜಿಲ್ಲೆ

ಸಾಲಬಾಧೆಯಿಂದ ರೈತ ಆತ್ಮಹತ್ಯೆ

ಜಗಳೂರು: ಸಾಲಬಾಧೆಯಿಂದ ಬೇಸತ್ತ ತಾಲೂಕಿನ ವೆಂಕಟೇಶಪುರದ ರೈತ ಜೀವನಾಯ್ಕ(50) ಅವರು ತಮ್ಮ ಅಡಕೆ ತೋಟದಲ್ಲಿ ಮಂಗಳವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಾಲ್ಕು ಎಕರೆ ಜಮೀನಿನಲ್ಲಿ ಬೋರ್‌ವೆಲ್ ಹಾಗೂ ಬೀಜ, ಗೊಬ್ಬರ ಮತ್ತಿತರ ಕೃಷಿ ಕಾರಣಗಳಿಗಾಗಿ ವಿವಿಧ ಬ್ಯಾಂಕ್‌ಗಳು ಹಾಗೂ ಕೈಸಾಲ ಸೇರಿದಂತೆ 5 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದರು.

ಆದರೆ, ಕಳೆದೆರೆಡು ಬೆಳೆ ಕೈಗೆ ಸಿಗಲಿಲ್ಲ. ಜತೆಗೆ, ಬೋರ್‌ವೆಲ್ ನೀರು ಸಿಗಲಿಲ್ಲ. ಇದರಿಂದ ಮಾಡಿದ ಸಾಲ ತೀರಿಸುವ ದಾರಿ ಕಾಣದೆ ಜೀವನದಲ್ಲಿ ಜುಗುಪ್ಸೆ ಹೊಂದಿದ್ದರು.

ಈ ಕುರಿತು ಬಿಳಿಚೋಡು ಠಾಣೆಯಲ್ಲಿ ದೂರು ದಾಖಲಾಗಿದೆ.