ರಾಣೆಬೆನ್ನೂರ: ಸಾಲಬಾಧೆಯಿಂದ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹಾರೋಗೊಪ್ಪ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.
ಗ್ರಾಮದ ಅಶೋಕ ಗದಿಗೆಪ್ಪ ಬಂಗೇರ (39) ಮೃತ ರೈತ.
ಇವರು 3 ಎಕರೆ ಜಮೀನು ಹೊಂದಿದ್ದು ಬ್ಯಾಂಕ್‌ನಲ್ಲಿ 36 ಸಾವಿರ ರೂ. ಹಾಗೂ ಬೇರೆ ಬೇರೆ ಸಂಘಗಳಲ್ಲಿ 4.16 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಬರಗಾಲದಿಂದ ಬೆಳೆಗಳು ಹಾಳಾಗಿ ಹೋಗಿದ್ದವು. ಇದರಿಂದ ಮನನೊಂದು ಜಾನುವಾರು ಕೊಟ್ಟಿಗೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.