ಜಿಲ್ಲೆ

ಹೆಚ್ಚೆಚ್ಚು ಕನ್ನಡ ಬಳಸುವಂತಾಗಲಿ

ಸೋಮಲಿಂಗ ತಳವಾರ

ಗೋಕಾಕ: ಎಲ್ಲರೂ ದಿನನಿತ್ಯ ಕನ್ನಡ ಬಳಸುವ ಮೂಲಕ ಭಾಷೆ ಶ್ರೀಮಂತಗೊಳಿಸಬೇಕು ಎಂದು ತಹಸೀಲ್ದಾರ್​ ಡಾ.ಮೋಹನ ಭಸ್ಮೆ ಹೇಳಿದರು.

ನಗರದ ಕರವೇ ಕಾರ್ಯಾಲಯದಲ್ಲಿ ಕರವೇ ಗೋಕಾಕ ತಾಲೂಕು ಟಕದ ವತಿಯಿಂದ ಕರವೇ ಸದಸ್ಯತ್ವ ಸಂಭ್ರಮ ಕಾರ್ಯಕ್ರಮದಡಿ ಬುಧವಾರ ಹಮ್ಮಿಕೊಂಡಿದ್ದ ನಾನು ಕರವೇ ಕಾರ್ಯಕರ್ತ ಸದಸ್ಯತ್ವ ಅಭಿಮಾನ ಕಾರ್ಯಕ್ರಮದಲ್ಲಿ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದರು. ಕನ್ನಡವೇ ನಮ್ಮ ಜೀವನ. ಕನ್ನಡಿಗರನ್ನು ಜಾಗತಗೊಳಿಸಿ ಭಾಷಾಭಿಮಾನ ಮೂಡಿಸಬೇಕು ಎಂದು ಕರೆ ನೀಡಿದರು. ಶೂನ್ಯ ಸಂಪಾದನಮಠದ ಮುರುರಾಜೇಂದ್ರ ಸ್ವಾಮೀಜಿ ಮಾತನಾಡಿ, ಕರವೇ ಗಟ್ಟಿ ಸಂಟನೆಯಾಗಿ ಬೆಳೆಯುತ್ತಿದೆ. ಎಲ್ಲರೂ ಕೆ ಜೋಡಿಸಿ ಇನ್ನಷ್ಟು ಬಲಿಷ್ಠಗೊಳಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕರವೇ ಸದಸ್ಯತ್ವ ಗೀತೆ ಸಂಯೋಜನೆಗೊಳಿಸಿದ ಕಲಾವಿದ ಶಿವಾಜಿ ಪಾಟೀಲರನ್ನು ಸನ್ಮಾನಿಸಲಾಯಿತು. ಸ್ಥಳಿಯ ಕರವೇ ಅಧ್ಯ ಬಸವರಾಜ ಖಾನಪ್ಪನವರ, ಶಿಕ ರಾಮಚಂದ್ರ ಕಾಕಡೆ, ಸಾದಿಕ್​ ಹಲ್ಯಾಳ ಉಪಸ್ಥಿತರಿದ್ದರು.