ಜಿಲ್ಲೆ

ಜೇನುಕೃಷಿಯಿಂದ ಇಳುವರಿ ಹೆಚ್ಚಳ

Avinash R

ಕಡಬ: ಜೇನುನೊಣಗಳು ರೈತ ಸ್ನೇಹಿಯಾಗಿದ್ದು, ಕೃಷಿಯಲ್ಲಿ ಉತ್ತಮ ಇಳುವರಿಗೂ ಸಹಕಾರ ನೀಡುತ್ತದೆ. ಸರ್ಕಾರ ಉಚಿತ ತರಬೇತಿ ನೀಡಿ ಜೇನುಪೆಟ್ಟಿಗೆಗಳನ್ನು ವಿತರಿಸುತ್ತಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಕಡಬ ತೋಟಗಾರಿಕೆ ಇಲಾಖೆ ಪುತ್ತೂರು, ದ.ಕ. ಜಿಲ್ಲಾ ಪಂಚಾಯಿತಿ, ಕಡಬ ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಕಡಬ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ವಲಯ ಜೇನು ಅಭಿವೃದ್ಧಿ ಯೋಜನೆಯಡಿ ಹಮ್ಮಿಕೊಂಡ ಜೇನು ಕೃಷಿ ತರಬೇತಿ ಮತ್ತು ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ ಮಾತನಾಡಿದರು.

ಪುತ್ತೂರು ತೋಟಗಾರಿಕಾ ಇಲಾಖೆಯ ಹಿರಿಯ ತೋಟಗಾರಿಕಾ ನಿರ್ದೇಶಕಿ ರೇಖಾ ಜೇನು ಕೃಷಿಗೆ ಇಲಾಖೆ ವತಿಯಿಂದ ನೀಡಲಾಗುತ್ತಿರುವ ಸವಲತ್ತುಗಳ ಮಾಹಿತಿ ನೀಡಿದರು.

ವೀರಪ್ಪ ಗೌಡ ಸುಳ್ಯ, ರಾಧಾಕೃಷ್ಣ ಬೆಟ್ಟಂಪಾಡಿ ತರಬೇತಿ ನೀಡಿದರು. ಕಡಬ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಚೆನ್ನಪ್ಪ ಕಜೆಮೂಲೆ ಉಪಸ್ಥಿತರಿದ್ದರು. ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ್​ ಎಂ. ಸ್ವಾಗತಿಸಿ, ವಂದಿಸಿದರು.