ಹಂಸಭಾವಿ: ಬಡತನ, ನಿರುದ್ಯೋಗದಂತಹ ಜ್ವಲಂತ ಸಮಸ್ಯೆಗಳಿಗೆ ಮೂಲ ಕಾರಣ ಹೆಚ್ಚುತ್ತಿರುವ ಜನಸಂಖ್ಯೆಯೇ ಕಾರಣ ಎಂದು ಮಹಾಂತಸ್ವಾಮಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಎ. ತಿಪ್ಪೇಶ ಹೇಳಿದರು.
ರೆಡ್ ಕ್ರಾಸ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಕಾಲೇಜ್‌ನಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಜಾಗೃತಿ ಅಭಿಯಾನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಭಾರತ ಪ್ರಸ್ತುತ ಎದುರಿಸುತ್ತಿರುವ ಸವಾಲುಗಳ ಕುರಿತು ವಿವರಿಸಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಾಲತೇಶ ಬಿ.ಎಸ್., ಅವರು, ಜನಸಂಖ್ಯೆ ಬೆಳವಣಿಗೆಯ ದುಷ್ಪರಿಣಾಮ ಹಾಗೂ ಜನಸಂಖ್ಯೆಯನ್ನು ತಡೆಗಟ್ಟುವ ಕ್ರಮಗಳ ಕುರಿತು ವಿವರಿಸಿದರು.
ಮತ್ತೊಬ್ಬ ಆರೋಗ್ಯ ನಿರೀಕ್ಷಣಾಧಿಕಾರಿ ಬಸನಗೌಡ ಪಾಟೀಲ್ ಮಾತನಾಡಿದರು. ಎನ್‌ಸಿಸಿ ಅಧಿಕಾರಿ ಹುಸೇನಸಾಬ್ ಕಳಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಪಿ. ವೆಂಕಟೇಶ್, ಸಂದೀಪ ಕುಲಕರ್ಣಿ, ಡಾ. ವಿಜಯಕುಮಾರ್ ದಾನೆನವರ್, ಡಾ. ಕೆ. ವಿ. ಜಯಪ್ಪ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಕುಸುಮಾ ಚಕ್ರಸಾಲಿ, ಚಿನ್ನಮ್ಮ ತೊಗರ್ಶಿ, ಶಾಂತಾ ತುಮರಿಕೊಪ್ಪ, ವಿಮಲಮ್ಮ ಹೊಸಮನಿ ಇತರರು ಉಪಸ್ಥಿತರಿದ್ದರು.
ಪಲ್ಲವಿ ಬೋಳಕಟ್ಟಿ ವಂದಿಸಿದರು. ಡಾ. ಹಮ್ಮಿಣಿ ಬಸವ್ವ ನಿರೂಪಿಸಿದರು. ಡಾ. ರಾಜಕುಮಾರ್ ಸಾವಳಗಿ ಸ್ವಾಗತಿಸಿದರು. ಕುಮಾರಿ ಅಂಜಲಿ ಹುಗಲಾರ್ ಹಾಗೂ ಸಂಗಡಿಗರು ಪ್ರಾರ್ಥಿಸಿದರು.