Increased opportunities from new technologies 
ಜಿಲ್ಲೆ

ಹೊಸ ತಂತ್ರಜ್ಞಾನಗಳಿಂದ ಅವಕಾಶ ವೃದ್ಧಿ

Vijayapura - Desk - Doddanagouda Gudihindin

ಮುಧೋಳ: ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ವೇಗದ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಸ್ಟಾರ್ಟ್‌ಅಪ್, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ರಕ್ಷಣಾ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಸಿಕೊಂಡು ನವೀಕರಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಕ್ಯಾಡ್‌ಮಾಕ್ಸ್ ಎರೋನಾಟಿಕ್ಸ್ ಲಿಮಿಟೆಡ್ ನಿರ್ದೇಶಕ ಡಾ. ವಿಜಯಕುಮಾರ ಹಿರೇಮಠ ಹೇಳಿದರು.

ನಗರದ ಬೀಳೂರುನಲ್ಲಿ ಸೋಮವಾರ ಆಯೋಜಿಸಿದ್ದ ಗುರುಬಸವ ಮಹಾಸ್ವಾಮಿಜಿ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಾಜಿಯ ವಾರ್ಷಿಕೊತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಡಿೆನ್ಸ್ ತಂತ್ರಜ್ಞಾನ, ಎಐ ಮಷಿನರಿಂಗ್ ಮತ್ತು 3ಡಿ ಮುದ್ರಣ ಮುಂತಾದ ನವೀನ ತಂತ್ರಜ್ಞಾನಗಳು ಸ್ಟಾರ್ಟ್‌ಅಪ್ ಮತ್ತು ಎಂಎಸ್‌ಎಂಇಗಳಿಗೆ ಹೊಸ ಅವಕಾಶ ಒದಗಿಸುತ್ತಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಶ್ರವಣಕುಮಾರ ಕೆರೂರ ಮಾತನಾಡಿ, ಈ ಬ್ಯಾಚ್ ನಮ್ಮ ಕಾಲೇಜಿನ ಅತ್ಯುತ್ತಮ ಬ್ಯಾಚ್‌ಗಳಲ್ಲಿ ಒಂದು. ವಿದ್ಯಾಭ್ಯಾಸ, ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಅವರು ಎಲ್ಲಿಗೆ ಹೋದರೂ ನಮ್ಮ ಸಂಸ್ಥೆಯ ಹೆಸರನ್ನು ಹೆಮ್ಮೆಪಡುವಂತೆ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಅವರ ಶ್ರಮ, ಶ್ರದ್ಧೆಯು ಇತರರಿಗೆ ಮಾದರಿ ಎಂದರು.

ಪ್ರಸಕ್ತ ಸಾಲಿನಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಶ್ವನಾಥ ಹಾವೇರಿ, ಪ್ರೊ. ಮಲ್ಲು ಹುಣಶಿಕಟ್ಟಿ, ಪ್ರೊ. ವಿನಯ ಶೆಟ್ಟರ ಮತ್ತಿತರರಿದ್ದರು.