ಹೊಳೆಹೊನ್ನೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆರ್.ಉಮೇಶ್ ‘ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ’ ವಿತರಿಸಿದರು. ಚಂದ್ರಶೇಖರ್ ಶೃಂಗೇರಿ, ಪಳನಿವೇಲು, ಹಾಲೇಶ್, ನಾಗರಾಜ್ ಇತರರಿದ್ದರು.  
ಜಿಲ್ಲೆ

ದಿನಪತ್ರಿಕೆ ಓದಿನಿಂದ ಜ್ಞಾನಭಂಡಾರ ವೃದ್ಧಿ

Shivamogga - Desk - Vinayakumar D B

ಹೊಳೆಹೊನ್ನೂರು: ವಿದ್ಯಾರ್ಥಿಗಳಿಗೆ ವಿಶ್ವದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಅರಿವಿರಬೇಕು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಆರ್.ಉಮೇಶ್ ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ ‘ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ’ ಪ್ರತಿಗಳನ್ನು ವಿತರಣೆ ಮಾಡಿ ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಪಠ್ಯದ ಜತೆ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿದರೆ ಜ್ಞಾನ ಭಂಡಾರ ಹೆಚ್ಚಾಗುವುದರಲ್ಲಿ ಎರಡು ಮಾತಿಲ್ಲ. ವಿದ್ಯಾರ್ಥಿಗಳ ಬುದ್ಧಿಮತ್ತೆ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯ ಪ್ರವೃತರಾಗಬೇಕು. ದಿನ ಕಳೆದಂತೆ ಮಕ್ಕಳಿಲ್ಲಿ ಓದುವ ಹವ್ಯಾಸ ಕಡಿಮೆ ಆಗುತ್ತಿದೆ. ಸಾಧ್ಯವಾದಷ್ಟು ಮಟ್ಟಿಗೆ ಪಾಲಕರು ಮಕ್ಕಳಿಗೆ ಓದುವಂತೆ ಪ್ರೇರೇಪಿಸಬೇಕು. ಸರ್ಕಾರಿ ಶಾಲೆ ಮಕ್ಕಳಿಗೆ ಕಡಿಮೆ ಬೆಲೆಯಲ್ಲಿ ವಿದ್ಯಾರ್ಥಿ ಸಂಚಿಕೆ ನೀಡುತ್ತಿರುವ ವಿಜಯವಾಣಿ ಪತ್ರಿಕೆಯ ಕಾಳಜಿಯನ್ನು ಮರೆಯುವಂತಿಲ್ಲ ಎಂದರು.
‘ವಿಜಯವಾಣಿ’ ಶಿವಮೊಗ್ಗ ಸ್ಥಾನಿಕ ಸಂಪಾದಕ ಚಂದ್ರಶೇಖರ್ ಶೃಂಗೇರಿ, ಪ್ರಾಚಾರ್ಯ ಪಳನಿವೇಲು, ಉಪನ್ಯಾಸಕ ಹಾಲೇಶ್, ಶಿಕ್ಷಕ ನಾಗರಾಜ್, ಪ್ರಸರಣ ವಿಭಾಗದ ಭರತ್ ಇತರರಿದ್ದರು.